"ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೇ
ಬೆಲ್ಲ-ಸಕ್ಕರೆಯಾಗು ದೀನ-ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ"
ಅಕ್ಕಿಯೊಳನ್ನವನು ಮೊದಲಾರು ಕಂಡವರು ?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೆ ನಿನಗೆ ಜಸ ಮಂಕುತಿಮ್ಮ??
ಒಂದಗುಳು ಹೆಚ್ಚಿರದು, ಒಂದಗುಳು ಕೊರೆಯಿರದು
ತಿಂದು ನಿನ್ನನ್ನಋಣ ತೀರುತಲೆ ಪಯಣ.
ಒಂದುಚಣ ಹಿಂದಿರದು, ಕಾದಿರದು ಮುಂದಕುಂ
ಸಂದಲೆಕ್ಕವದೆಲ್ಲ ಮಂಕುತಿಮ್ಮ.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ।
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ।।
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ।
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ।।
ಆವ ನೆಲದಲಿ ಮೇದೊ; ಆವ ನೀರನು ಕುಡಿದೊ |
ಆವು ಹಾಲ್ಗರೆವುದದನಾರು ಕುಡಿಯುವನೋ! ||
ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |
ಭಾವಿಸಾ ಋಣಗತಿಯ - ಮಂಕುತಿಮ್ಮ ||
ಭಾವಾರ್ಥ : ಹಸು ಮೇಯುವಾಗ ಅದಕ್ಕೆ ಶುದ್ಧ, ಅಶುದ್ಧ ನೆಲ ಎಂಬ ಭೇದ ಇರುವುದಿಲ್ಲ. ಅದು ಶುದ್ಧ ನೀರನ್ನು ಹುಡುಕದೆ ಸಿಕ್ಕಿದ ಯಾವುದೋ ನೀರನ್ನು ಕುಡಿಯುತ್ತದೆ. ಆದರೆ, ಅದು ನೀರನ್ನು ಬೆರೆಸದೇ ಪರಿಶುದ್ಧ ಹಾಲನ್ನು ಕೊಡುತ್ತದೆ. ಇದನ್ನು ಕುಡಿಯುವ ಮನುಷ್ಯ ಬೇರೆಲ್ಲೋ ಇರುತ್ತಾನೆ ಅದರಿಂದ ಆತನಿಗೆ ದೊರೆವ ಶಕ್ತಿ ಅವರಿಂದ ಯಾವ ಕೆಲಸವನ್ನು ಮಾಡಿಸುವುದೋ! ಇಲ್ಲಿ ಹಾಲು ಕುಡಿದ ವ್ಯಕ್ತಿ ನೇರವಾಗಿ ಹಸುವಿಗೆ ಹುಲ್ಲು ಹಾಕಿರುವುದೇ ಇಲ್ಲ. ಅದೃಶ್ಯ ಋಣಗಳಿಗೆ ನಾವು ಜವಾಬ್ದಾರರಾಗುವುದಿಲ್ಲ. ಹೀಗೆ ಈ ಋಣಗತಿಯ ಚಲನೆಯನ್ನು ಅರಿಯಬೇಕು.
ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ |
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ||
ಗದ್ದಲವ ಬಿಡಲು ಕಡೆದಿನವಾನುಮಾದೀತೆ? |
ನಿದ್ದೆವೊಲು ಸಾವ ಪಡೆ - ಮಂಕುತಿಮ್ಮ ||
ಭಾವಾರ್ಥ : ನೀನು ಈ ಜಗತ್ತಿಗೆ ಬರುವಾಗ ಸದ್ದುಮಾಡಿಕೊಂಡೇ ಬಂದವನು ಮತ್ತು ಬಾಳಿನುದ್ದಕ್ಕೂ ಗದ್ದಲದಲ್ಲೇ ಬದುಕಿದವನು. ಕಡೆಯಪಕ್ಷ ನಿನ್ನ ಅಂತಿಮ ಕ್ಷಣದಲ್ಲಾದರೂ ಈ ಗದ್ದಲದಿಂದ ಹೊರಬಂದು ನಿದ್ರೆಯಂತಹ ಸಾವನ್ನು ಪಡೆ.
ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ |
ಯಾರ ಭುಜಕಂ ನಿನ್ನ ಭಾರವಾಗಿಸದೆ ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ |
ಪಾರಗಾಣಿಸ ಬೇಡು - ಮಂಕುತಿಮ್ಮ ||
ಭಾವಾರ್ಥ : ಯಾರೋ ನೀಡುವ ಕೈ ತುತ್ತಿಗೆ ನಾನು ಕಾಯುವಂತಾಗದೆ, ಯಾರ ಭುಜಕ್ಕೂ ನಾನು ಹೊರೆಯಾಗದೆ, ಯಾರದೇ ಪ್ರೀತಿ, ಪ್ರೇಮ ಮತ್ತು ಮೋಹಗಳ ಸೆಳೆತಕ್ಕೆ ಅಂಟದಹಾಗೆ, ಈ ಜಗತ್ತಿನಿಂದ ನಿರ್ಗಮಿಸುವ ದಾರಿ ತೋರೋ " ಎಂದು ಪರಮಾತ್ಮನಲ್ಲಿ ಬೇಡು.
ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ ।
ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ॥
ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು।
ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ॥ ೫೮೪ ॥
ಜಗತ್ತಿನ ಎಲ್ಲ ಕೆಲಸದ ಹೊರೆಯನ್ನು ಹೊರುವ ಅಧಿಕಾರ ನಿನಗಿಲ್ಲ. ಆದರೆ ನಿನಗೆ ಹೊರೆಯೇ ಇಲ್ಲವೆಂದಲ್ಲ!!!! ನೀನು ಮಾಡಲೇ ಬೇಕಾದ ಕರ್ತವ್ಯದ ಹೊರೆ ನಿನಗಿದೆ. ನಿನ್ನ ಕೈಲಾದಷ್ಟನ್ನು ನಿಷ್ಠೆಯಿಂದ ಮಾಡು ಮತ್ತು ಮಿಕ್ಕದ್ದನ್ನು ನಿನ್ನನ್ನು ಪಾಲಿಸುವ ಆ ದೈವದಲ್ಲಿ ದೃಢ ನಂಬಿಕೆ ಇಟ್ಟು ಬಿಟ್ಟುಬಿಡು. ನಂಬಿಕೆ ಪೂರ್ಣವಾಗಿರಲಿ. ಏಕೆಂದರೆ ಅವನು ಅರೆಬರೆ ನಂಬಿಕೆಯನ್ನು ಒಪ್ಪುವುದಿಲ್ಲ.
ಡಿ.ವಿ.ಗುಂಡಪ್ಪನವರು
Invited by: Krishna Prasad
if the data has not been changed, no new rows will appear.
Day | Followers | Gain | % Gain |
---|---|---|---|
July 21, 2023 | 153 | 0 | 0.0% |
November 10, 2022 | 153 | -2 | -1.3% |
July 25, 2022 | 155 | +1 | +0.7% |
June 18, 2022 | 154 | +10 | +7.0% |
May 11, 2022 | 144 | +2 | +1.5% |
April 03, 2022 | 142 | +17 | +13.6% |
February 04, 2022 | 125 | +16 | +14.7% |
December 29, 2021 | 109 | +23 | +26.8% |
November 21, 2021 | 86 | +11 | +14.7% |