'ಸುಜ್ಞಾನ ದೀಪಿಕಾ'ದ ಸುಮನಸರಿಗೆ ವಂದನೆಗಳು.
ಇದು 'ಸನಾತನ ವಾಙ್ಮಯ ದೀಪಿಕಾ' ದಂತೆಯೇ Club House ನಲ್ಲಿ ದೈವ ಚಿಂತನೆಯ ಹಾದಿಯಲ್ಲಿ ಸಮಾನ ಮನಸ್ಕರು ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಬುಧವಾರ ಒಟ್ಟಿಗೆ ಸೇರುವ ಒಂದು ಪ್ರಯತ್ನ. ಇಹದ ಬದುಕು ನಮ್ಮುಸಿರುವವರೆಗೆ ಒಂದು ಸುದೀರ್ಘ ಪಯಣ. ಈ ಪಯಣದಲ್ಲಿ ಎಲ್ಲೋ ಒಂದೆಡೆ ಕುಳಿತು ವಿಶ್ರಾಂತರಾಗುವುದು, ವಿದ್ವಜ್ಜನರನ್ನು, ಸಜ್ಜನರನ್ನು ಭೇಟಿ ಮಾಡುತ್ತ ನಮಗರಿಯದ ವಿಷಯಗಳನ್ನು ಅವರಿಂದ ಕಲಿಯುವುದರಿಂದ ಕೂಡ ಪರದ ದಾರಿಯು ಸುಗಮಗೊಳ್ಳುತ್ತದೆ. ಇದಕ್ಕೆ ಜಾತಿ, ಮತ, ಪಂಧ, ಬಣ್ಣ, ಗಂಡು, ಹೆಣ್ಣು, ಹಿರಿಯ ಕಿರಿಯ ಎಂಬ ಭೇದ ಗಳಿಲ್ಲ.ಇಂತಹ ಒಂದು ಪ್ರಯತ್ನವೇ 'ಸುಜ್ಞಾನ ದೀಪಿಕಾ' ದ ಮೂಲ ಧ್ಯೇಯ. ಅದರ ಮೊದಲ ಕಾರ್ಯಕ್ರಮ.ನಮ್ಮ ಮೊದಲ ಕಾರ್ಯಕ್ರಮವೇ ನವರಾತ್ರಿಯ ಶುಭ ಪರ್ವದಲ್ಲಿ ವಿಜಯದಶಮಿಯಂದು ಪ್ರಾರಂಭಗೊಂಡಿದೆ.ಇಲ್ಲಿ ಈಗಾಗಲೇ ತಿಳಿಸಿದಂತೆ ನಮ್ಮಲ್ಲಿರುವ ಭಗವಂತನ ಕುರಿತಾದ ಭಕ್ತಿ ಭಾವವನ್ನು ಭಜನೆ, ಸ್ತೋತ್ರ, ವಚನ, ಅನುಭಾವಿ ಗೀತೆಗಳು, ಕಾವ್ಯ ವಾಚನಗಳ ಮೂಲಕ ವ್ಯಕ್ತಪಡಿಸುವುದು ಮತ್ತು ಶ್ರೋತೃಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭವದ ಜಂಜಡಗಳಿಂದ ಒಂದಿನಿತು ದೂರಾಗಿ ಅವನನ್ನು ಸ್ಮರಿಸುವುದು. ಭಕ್ತಿ ಪಂಥವೆಂದರೆ ನಮ್ಮ ಅಹಮು ಗಳನ್ನು ಬಿಟ್ಟು ಭಗವಂತನನ್ನು ಸ್ತುತಿಸಿ ಹಾಡುವುದು, ಕುಣಿಯು- ವುದು. ಅದೂ ಒಂದು ಸೇವೆಯೇ. ದೇವನನ್ನು ಸುಪ್ರೀತಗೊಳಿಸುವ ಅಷ್ಠಾವಧಾನ ಸೇವೆಗಳಲ್ಲಿ ಸಂಗೀತ, ನೃತ್ಯ, ಪುರಾಣವಾಚನ, ಕಾವ್ಯ ವಾಚನ ಹೀಗೆ ಎಲ್ಲವೂ ಇದೆ. ವಾರಕ್ಕೊಬ್ಬ ಸುಜ್ಞಾನ ಸಂಪನ್ನರಾದ ಹಿರಿಯರನ್ನು ಕರೆಸಿ ಅವರ ಮೂಲಕ ಅರಿವಿನ ಬೆಳಕನ್ನುಪಡೆಯುವ ಪ್ರಯತ್ನ ನಮ್ಮದು. ಉಳಿದಂತೆ ಶ್ರೋತೃಗಳ ಭಾಗವಹಿಸುವಿಕೆ.
ವಾರಕ್ಕೊಂದು ದಿನ, ತೊಂಭತ್ತು ನಿಮಿಷಗಳಲ್ಲಿ ನಮ್ಮ ವ್ಯಾವಹಾರಿಕ ಜಂಜಡಗಳನ್ನು ಮರೆತು 'ಸುಜ್ಞಾನ ದೀಪಿಕಾ' ದಲ್ಲಿ ಸದ್ವಿಚಾರಗಳನ್ನು ಕೇಳುತ್ತ, ಮನನ ಮಾಡುತ್ತ ಬೆಳಕಿನೆಡೆ ಸಾಗೋಣ. ನಮ್ಮಲ್ಲಿನ ಪ್ರತಿಭೆಗಳನ್ನು ಅರಿತುಕೊಳ್ಳೋಣ, ಪರಸ್ಪರ ಪರಿಚಿತರಾಗೋಣ.
ನೀವೂ ಬನ್ನಿ - ನಿಮ್ಮ ಬಂಧು ಮಿತ್ರರು ಪಾಲ್ಗೊಳ್ಳುವಂತೆ ತಿಳಿಸಿ.
Day | Members | Gain | % Gain |
---|---|---|---|
June 16, 2024 | 527 | +13 | +2.6% |
March 15, 2024 | 514 | +5 | +1.0% |
January 25, 2024 | 509 | +9 | +1.8% |
December 12, 2023 | 500 | +15 | +3.1% |
November 03, 2023 | 485 | +23 | +5.0% |
October 03, 2023 | 462 | +82 | +21.6% |
September 04, 2023 | 380 | +52 | +15.9% |
August 06, 2023 | 328 | +22 | +7.2% |