Whatsapp no; 9844277418
ಪರಿಚಯ ಕೃಪೆ "DBG" ;
https://m.facebook.com/story.php?story_fbid=3086653968077318&id=100001982348605👇
ಅರುಣ್ ಜಿ. ಶೇಟ್ ಇವರು 1984 ರಲ್ಲಿ ಚಿನ್ನದ ಕುಶಲಕರ್ಮಿ ಕುಟುಂಬದಲ್ಲಿ ಶ್ರೀ ಎಸ್. ಗಜಾನನ ಶೇಟ್ ಮತ್ತು ಶ್ರೀಮತಿ ಗೀತಾ ಜಿ ಶೇಟ್ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದರು.
ಕೊಂಕಣಿ ಅಕಾಡೆಮಿ : ಪ್ರಸ್ತುತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕರ್ನಾಟಕ ಸರಕಾರ ಇದರ ನಿರ್ದೇಶಕರಾಗಿ(ಸದಸ್ಯ) 2019 ರಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನೇತ್ರತ್ವದ ಸರಕಾರದಿಂದ ನೇಮಕಗೊಂಡಿರುತ್ತಾರೆ.
ಇದಕ್ಕೂ ಮೊದಲು ನಗರದ ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಕೊಂಕಣಿ ಸಾಹಿತ್ಯ, ಕಲೆ, ಸಂಸ್ಕ್ರತಿ, ಸಂಗೀತ, ನಾಟಕ, ಯಕ್ಷಗಾನ ಮುಂತಾದ ಕ್ಷೇತ್ರದಲ್ಲಿ ಅದ್ಭುತವಾದ ಮುಂದಾಳತ್ವವನ್ನು ನೀಡಿರುತ್ತಾರೆ.
ಹಾಗೂ ಇತ್ತೀಚೆಗೆ ಇವರು ಬರೆದ ಕೊಂಕಣಿ ಪುಸ್ತಕವಾದ "ಏಕ್ವಟಾಚೋ ಸರದಾರ್" ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಾಶಿತಗೊಂಡಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಹಾಗೂ ವಿಶ್ವದ ಅತೀ ಎತ್ತರದ Statue Of Unity ಯ ಬಗ್ಗೆ ಖುದ್ದಾಗಿ ಗುಜರಾತಿನ ಆ ಸ್ಥಳಕ್ಕೆ ಹೋಗಿ ಸ್ಥಳ ಅಧ್ಯಯನ ನಡೆಸಿ ಪುಸ್ತಕವನ್ನು ಹೊರತಂದಿದ್ದಾರೆ.
ಅನೇಕ ಕೊಂಕಣಿ ಕಲಾವಿದರಿಗೆ, ಸಂಗೀತಗಾರರಿಗೆ, ಸಾಧಕರಿಗೆ ಪ್ರೋತ್ಸಾಹ ನೀಡಿ ಅವರನ್ನು ಮುಖ್ಯ ವಾಹಿನಿಯಲ್ಲಿ ಗುರುತಿಸುವಂತೆ ಮಾಡಿದ ಕಾರ್ಯವೂ ಶ್ಲಾಘನೀಯವಾಗಿದೆ.
ವೈಯಕ್ತಿಕ ಜೀವನ; ದೈವಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು ಅದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಇವರು ಸಂಪೂರ್ಣ ಸಸ್ಯಾಹಾರಿಯಾಗಿದ್ದು ಧಾರ್ಮಿಕ ಹಾಗೂ ಸಾಮಾಜಿಕ ಆಚಾರ- ವಿಚಾರಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕತೆಯ ಸಮನ್ವಯತೆಯನ್ನು ಇವರಲ್ಲಿ ಕಾಣಬಹುದಾಗಿದೆ ಹಾಗೂ ತಮ್ಮ ಜೀವನದ ಅಧಿಕಾಂಶ ಸಮಯವನ್ನು ರಾಷ್ಟ್ರ ಹಾಗೂ ಸಮಾಜ ಕಾರ್ಯದಲ್ಲಿ ತೊಡಗಿ ಸುವ ಮುಖೇನ ನಮ್ಮ ಸಮಾಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾಭ್ಯಾಸ; ಕೆನರಾ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ ಚಿನ್ನದ ಕೆಲಸ ಹಾಗೂ ವಜ್ರಾಭರಣ ತಯಾರಿಕೆ ಹಾಗೂ ಸೆಟ್ಟಿಂಗ್ ಕೆಲಸವನ್ನು ಕ್ರಮವಾಗಿ ಶ್ರೀ ವಿನಾಯಕ ಶೇಟ್, ಶ್ರೀ ದಯಾನಂದ ಆಚಾರ್ಯ, ಶ್ರೀ ರಮೇಶ್ ಆಚಾರ್ಯ ಅವರಲ್ಲಿ ಕಲಿತರು. ವಜ್ರಾಭರಣ ತಯಾರಿಕೆ ಕಲಿಯುವ ಸಂದರ್ಭದಲ್ಲಿ ಅಂದು ಸಾಮಾಜಿಕ ತಾರತಮ್ಯವನ್ನು ಕೂಡಾ ಎದುರಿಸಿದ ಇವರು ಬೆಂಗಾಲಿ ಶ್ರೀ ರಾಕೇಶ್ ಕೋಲೆ ಅವರ ವರ್ಕ್ ಶಾಪ್ ನಲ್ಲಿ ಚಿನ್ನ-ವಜ್ರಾಭರಣ ಕೆಲಸವನ್ನು ಕಲಿತ ಇವರು ಬೆಂಗಾಲಿ ಭಾಷೆಯಲ್ಲಿ ಮಾತನಾಡಬಲ್ಲರು ಹಾಗೂ ಆರು ಭಾಷೆಗಳನ್ನು ಬಲ್ಲವರಾಗಿದ್ದಾರೆ. ತನ್ನ ಅಣ್ಣ ಶ್ರೀ ಕಿರಣ್ ಜಿ ಶೇಟ್ ಅವರು ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆದ ಬಳಿಕ ಅವರ ಪ್ರೇರಣೆಯಿಂದ B.COM ಪದವಿಯನ್ನು KSOU ನಲ್ಲಿ ಪೂರ್ಣಗೊಳಿಸಿದ್ದಾರೆ.
IIGJ & GJEPC ಯಲ್ಲಿ CAD (ಕಂಪ್ಯೂಟರ್ ಎಡೆಡ್ ಡಿಸೈನ್) ಕಲಿತು ಕಾಸ್ಟಿಂಗ್ (CAM) ವಿಧಾನವನ್ನು ಬಳಸಿ ವಜ್ರಾಭರಣ ತಯಾರಿಕಾ ವೃತ್ತಿಯನ್ನು ಆಧುನಿಕಗೊಳಿಸಿ ಹಲವರಿಗೆ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ಮೂಲಕ ಒಬ್ಬ ಯಶಸ್ವಿ ಉದ್ಯಮಿಯನ್ನು ಇವರಲ್ಲಿ ಕಾಣಬಹುದಾಗಿದೆ.
ಪ್ರಸ್ತುತ ಮಂಗಳೂರಿನ ಕಾರಸ್ಟ್ರೀಟ್ ನಲ್ಲಿ ಗ್ರಾಹಕರಿಗಾಗಿ ಅರುಣ್ ಜಿ. ಶೇಟ್ ಜ್ಯುವೆಲ್ಸ್ & ಡೈಮಂಡ್ ವರ್ಕ್ಸ್ ಶೋರೂಂ ಅನ್ನು ಹೊಂದಿರುತ್ತಾರೆ.
Invited by: Naresh Shenoy
if the data has not been changed, no new rows will appear.
Day | Followers | Gain | % Gain |
---|---|---|---|
September 13, 2023 | 394 | +7 | +1.9% |
January 16, 2023 | 387 | +1 | +0.3% |
August 06, 2022 | 386 | +7 | +1.9% |
June 30, 2022 | 379 | -4 | -1.1% |
May 24, 2022 | 383 | +3 | +0.8% |
April 16, 2022 | 380 | +2 | +0.6% |
March 08, 2022 | 378 | +6 | +1.7% |
December 04, 2021 | 372 | +1 | +0.3% |
October 26, 2021 | 371 | +6 | +1.7% |
September 19, 2021 | 365 | +293 | +407.0% |