ಬರಹವೊಂದು ಹಸಿವಂತೆ.
ಬರಹವೊಂದು ಗುರುವಂತೆ
ಬರಹವೊಂದು ಗುರುತಂತೆ.
ಬರಹ ದೇವ ಕೂಟ್ಟ ವರದಂತೆ.
ಅಗತ್ಯಕ್ಕಿಂತ ಹೆಚ್ಚು ಗೌರವ ಕೊಟ್ಟು.
ಜಗತ್ತಿಗೂ ಒಂದಿಷ್ಟು ಪರಿಚಯ ಕೊಟ್ಟು
ಎಲ್ಲೆಲ್ಲಿದವರನ್ನೊ ನನ್ನವರಾಗಿಸಿ
ನಗುವಿಗೂ ಅಳುವಿಗೂ ಜೊತೆಯಾಗುವ
ನಂಬಿಕೆಯ ಸೃಷ್ಟಿಸಿ, ಆತ್ಮೀಯರ ಬಳಗವನ್ನೆ
ನನ್ನೆದೆಗೆ ಪರಿಚಯಿಸಿದ ಪರಿಗೆ ಚಿರಋಣಿ.
ನಾ ಗೀಚುವ ಖಾಲಿ ಬರಹಕ್ಕೂ ಗೌರವ ಅಭಿಮಾನ
ಆತ್ಮೀಯ ಪ್ರೀತಿಯ ತುಂಬಿದ ನಿಮ್ಮೆಲ್ಲರಿಗೂ
ನಾನೆಂದಿಗೂ ಚಿರಋಣಿ.
ಸಣ್ಣ ಚುಚ್ಚು ಮಾತಿಗೆ ಆಗಾಗ ಹಿಂದಡಿ ಇಡುವ
ಮನಸ್ಸಿಗೆ ಧೈರ್ಯ ತುಂಬಿ ಇನ್ನಷ್ಟು ಹುರುಪಿನಲ್ಲಿ
ಮನಸ್ಸು ನಳನಳಿಸಿ ಬರೆಯಬೇಕು. ಪ್ರೇಮವೇ ಒಲಿದು ಬರುವಂತೆ. ಪ್ರೀತಿಸುವ ಮನಸ್ಸುಗಳು ಇನ್ನಷ್ಟು ಆಪ್ತವೆನ್ನಿಸುವಂತೆ. ಆಡಿಕೊಳ್ಳುವವರು ಆಗಾಗ ಕುರುಬುವಂತೆ ಒಂದಿಷ್ಟಾದರು ಗೀಚಬೇಕು.
ಸತ್ತಾಗ ಸಣ್ಣದೊಂದು ನೆನಪಾಗಿ ಉಳಿಯುವಂತೆ.
I love you ಬರಹವೇ