Azeez Kirugunda on Clubhouse

Updated: Nov 5, 2023
Azeez Kirugunda Clubhouse
362 Followers
423 Following
Jun 26, 2021 Registered
@lagori111 Username

Bio

ಮುಸ್ಲೀಮರು ಹೆಣ್ಣಿಗೆ ನೀಡಿರುವ ಸ್ಥಾನ-ಮಾನ ಯಾವುದು ಎನ್ನುವ ಬಗ್ಗೆ ಪ್ರಸ್ತುತ ಚರ್ಚೆಗೆ ಅರ್ಹವಾದ ವಿಷಯ ಎಂದುಕೊಳ್ಳುತ್ತೇನೆ. ಬುರ್ಖಾದ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿವೆಯಾದರೂ ಪರಿಣಾಮಕಾರಿಯಾಗುತ್ತಿಲ್ಲ . ಸರಿ-ತಪ್ಪುಗಳ ನಡುವೆ ಒಪ್ಪತಕ್ಕ ಸಲಹೆಗಳು ಬರುತ್ತಿವೆಯಾದರೂ ಈತನಕ ಯಾವ ಪಲಪ್ರದ ಬೆಳವಣಿಗೆಗಳೂ ನಡೆದಿಲ್ಲ. ನಡೆಯುತ್ತಿಲ್ಲ ಕೂಡ. ಚರ್ಚೆಗಳು ಕೇವಲ ಚರ್ಚೆಗಳಾಗಿಯೇ ಉಳಿದು ಬಿಡುತ್ತಿವೆ. ಭಾಷಣಗಳು ಕೇವಲ ಶಬ್ದಗಳಾಗಿ ನಿಶ್ಯಬ್ದ ರೂಪಕ್ಕಿಳಿಯುತ್ತಿವೆ. ಮಾತುಗಳು ದ್ವನಿಗಳಾಗಿ ಮೊಳಗುತ್ತಿಲ್ಲ. ಮೌನವೇ ಮಾತಾಗಿ ಹೋಗುತ್ತಿವೆ. ಆದರೆ ದಶಕಗಳ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಂದಿನ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳ ಮೆಟ್ಟಿಲು ಹತ್ತುವಷ್ಟು ಮುಂದುವರಿದಿದ್ದಾರೆ ಎಂದುಕೊಂಡು ನಾವು ನಿಟ್ಟುಸಿರು ಬಿಡುವಲ್ಲಿ ಕಾಲ ತಳ್ಳುತ್ತಿದ್ದೇವೆ. ಮೂಕ ವೇಧನೆಯೊಂದಿಗೆ ಮತ್ತೆ ಮೌನದ ರೂಪ ತಾಳುತ್ತಿದ್ದೇವೆ. ಆಧುನಿಕ ಯುಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಜತೆಗೆ ಉತ್ತಮವಾದ ಶಿಕ್ಷಣ ಕೊಡಿಸುವ ಅಗತ್ಯ ಖಂಡೀತ ಇದೆ. ಅದು ನಮ್ಮ ಮುಂದಿದೆ. ಮುಸಲ್ಮಾನರು ಹೆಣ್ಣೂ ಮಕ್ಕಳಿಗೆ ಸ್ವಾತಂತ್ರ್ಯ ನೀಡುತ್ತಾರೆ/ನೀಡುವುದಿಲ್ಲ ಎನ್ನುವುದು ಚರ್ಚೆಯಾಗಬಾರದು. ಆ ಹೆಣ್ಣು ಮಕ್ಕಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಸಮಾಜದಲ್ಲಿ ಜನ ಮಾನಸದಲ್ಲಿ ಹರಿದಾಡಬೇಕು. ಈ ಮೂಲಕ ಮುಸ್ಲೀಂ ಹೆಣ್ಣು ಮಕ್ಕಳು ಇನ್ನಷ್ಟು ಮುಂದುವರಿಯುವ ಜತೆಗೆ ಮುಂಚೂಣಿಗೆ ಬರುವುದು, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಹ ಕಾರ್ಯ ನಡೆಯಬೇಕಾಗಿದೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೋರ್ವಳು ಇದ್ದೇ ಇರುತ್ತಾಳೆ ಎನ್ನುವ ಮಾತಿದೆ. ಅಂತಹ ಹೆಣ್ಣನ್ನು ಮುಂಚೂಣಿಗೆ ತರುವುದರಿಂದ ಖಂಡೀತ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ. ಇವತ್ತು ಸಾಮಾಜಿಕ, ರಾಜಕೀಯ ಹೀಗೆ ಯಾವ ಕ್ಷೇತ್ರಗಳನ್ನು ಗಮನಿಸಿದರೂ ಮುಸ್ಲೀಮರ ಸಂಖ್ಯೆ ತೀರ ಕಡಿಮೆ. ಅದರಲ್ಲೂ ಮುಸ್ಲಿಂ ಮಹಿಳೆಯರ ಸಹಭಾಗಿತ್ವ ಇಲ್ಲವೇ ಇಲ್ಲ ಎನ್ನುವ ಮಟ್ಟಿಗಿದೆ. ನೀವು ಗಮನಿಸಿ ನೋಡಿ, ಬಹುತೇಕ ಯಾವ ಆಸ್ಪತ್ರೆಯನ್ನು ನೋಡಿದರೂ ರೋಗಿಗಳ ಸಾಲಿನಲ್ಲಿ ಬುರ್ಖಾದಾರಿಗಳಿರುತ್ತಾರೆ. ಆದರೆ ಅಲ್ಲಿರುವ ನರ್ಸುಗಳ, ವೈದ್ಯರ ಸ್ಥಾನಗಳಲ್ಲಿ ಮುಸಲ್ಮಾನರು ಇರುವುದಿಲ್ಲ. ಎಲ್ಲೋ ಅಲ್ಲೊಂದು, ಇಲ್ಲೊಂದು ಇರುತ್ತಾರೆ. ಹೊರತುಪಡಿಸಿದರೆ ಮುಸ್ಲಿಂ ಹೆಣ್ಣು ಮಕ್ಕಳು ಉನ್ನತ ವ್ಯಾಸಾಂಗದಲ್ಲಿ ಮುಂದುವರಿಯದಿರುವುದು ಇದಕ್ಕೆ ಕಾರಣವಾಗಿದೆ. ಆ ತನಕ ಹೋಗುವ ಮೊದಲೇ ವಿವಾಹ ಬಂಧನ ನಡೆಯುವುದು ಹೆಣ್ಣನ್ನು ಮನೆಯೊಳಗೆ ಕಟ್ಟಿ ಹಾಕುವಂತೆ ಮಾಡುತ್ತಿದೆ. ನೀವು ಗಮನಿಸಿ ನೋಡಿ, ನಾವು ಎಲ್ಲೆಲ್ಲೂ ಅಧಿಕಾರಿಗಳು, ಸರ್ಕಾರಿ ನೌಕರಿ, ಕಛೇರಿ ಸಿಬ್ಬಂದಿಗಳಾಗಿ, ಬಸ್ ನಿರ್ವಾಹಕರು, ಚಾಲಕರು, ಆಟೋ ಚಾಲಕರಾಗಿ, ಅಂಗಡಿಗಳಲ್ಲಿ ವ್ಯಾಪಾರಿಗಳಾಗಿ ಇನ್ನಿತರೆ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಮಹಿಳೆಯರನ್ನು ಕಾಣುತ್ತೇವೆ. ಆದರೆ ಅಲ್ಲೆಲ್ಲಾ ಮುಸ್ಲಿಂ ಮಹಿಳೆಯರನ್ನು ನಾವು ಕಾಣುವುದು ತೀರ ಕಡಿಮೆ. ಕಾಣುತ್ತೇವಾದರೂ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಲ್ಲಿ ಕಾಣುತ್ತೇವೆ. ಇವತ್ತು ಮಹಿಳೆಯರು ಸಮಾಜದ, ಸಾರ್ವಜನಿಕ ರಂಗಗಳಲ್ಲಿ ಇರದಿರುತ್ತಿದ್ದರೆ ನಾವಿಂದು ತೀವ್ರ ಅದೋಗತಿಯಲ್ಲಿ ಕಾಲ ತಳ್ಲಬೇಕಾಗಿ ಬರುತ್ತಿತ್ತು. ಅದಾಗದೇ ಮಹಿಳೆಯರು ಕೆಲಸದಲ್ಲಿ ತಲ್ಲೀನರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಮಹಿಳೆಯರು ಅಂತರಿಕ್ಷದಲ್ಲಿ ಹಾರಾಡಲಿ, ಬೇಡ ಎಂದು ನಿರ್ಲಕ್ಷ್ಯ ಸರಿಯಲ್ಲ. ಮುಸ್ಲಿಂ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದುವರಿಯಲು ಅಡ್ಡಿಸುವ ಜನರು ನಮ್ಮಲ್ಲಿಲ್ಲ ಎಂದು ಅಂದುಕೊಳ್ಳುವ ಕಾಲ ಸನ್ನಿಹಿತವಾಗುವುದನ್ನು ಜಗತ್ತು ಭರವಸೆಯೊಂ

ಫೇಸ್ಬುಕ್ ಪೋಸ್ಟ್ 22/1/2015

Last 10 Records

if the data has not been changed, no new rows will appear.

Day Followers Gain % Gain
November 05, 2023 362 +9 +2.6%
January 30, 2023 353 +3 +0.9%
August 09, 2022 350 -1 -0.3%
July 03, 2022 351 -4 -1.2%
May 27, 2022 355 +4 +1.2%
April 19, 2022 351 -1 -0.3%
March 11, 2022 352 +5 +1.5%
December 06, 2021 347 +2 +0.6%
October 28, 2021 345 +11 +3.3%
September 22, 2021 334 +308 +1,184.7%

Charts

Member of

More Clubhouse users