https://fb.watch/aesvFSkHWd/
ಕುವೆಂಪು ಸಂದರ್ಶನ 💐❤️🙏
🌸ವಿಶ್ವಮಾನವಗೀತೆ🌸
ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ;
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು ,ಆಗು, ಆಗು, ಆಗು,
ಆಗು ನೀ ಅನಿಕೇತನ!
ರಚನೆ: ರಾಷ್ಟ್ರಕವಿ ಕುವೆಂಪು
ಕುವೆಂಪು ಬೆಳಗಿನ ಶುಭೋದಯ
💐❤️🙏
*ಇಲ್ಲಿ, ಯಾರೂ ಮುಖ್ಯರಲ್ಲ*
*ಯಾರೂ ಅಮುಖ್ಯರಲ್ಲ*
*ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆಮುಟ್ಟುವುದೂ ಇಲ್ಲ*
*ಇಲ್ಲಿ ಎಲ್ಲಕ್ಕೂ ಇದೆ ಅರ್ಥ*
*ಯಾವುದೂ ಅಲ್ಲ ವ್ಯರ್ಥ*
*ನೀರೆಲ್ಲವೂ ತೀರ್ಥ*🇮