ಹಿಂದು ವೀರಶೈವ ಲಿಂಗಾಯತ on Clubhouse

ಹಿಂದು ವೀರಶೈವ ಲಿಂಗಾಯತ Clubhouse
294 Members
Updated: Jul 16, 2024

Description

🌷ಹಿಂದು - ಶೈವ - ವೀರಶೈವ ಲಿಂಗಾಯತ🌷
"ವೀರಶೈವ-ಲಿಂಗಾಯತ"ವು ಹಿಂದು ಧರ್ಮದ "ಶೈವ ಪರಂಪರೆ"ಯ ಸುಧಾರಿತ ಮುಂದುವರಿದ ಭಾಗ. ಏಕೆಂದರೆ ಶಿವನಾಮ ಸ್ಮರಣೆ (ಓಂ ನಮಃ ಶಿವಾಯ), ಶಿವ ಭಕ್ತಿ, ಶಿವ ಪೂಜೆ, ಶಿವಲಿಂಗ ಪೂಜೆ ಮತ್ತು ಇಷ್ಟಲಿಂಗ (ಸ್ಥಾವರ ಲಿಂಗದ ಪ್ರತಿರೂಪ) ಪೂಜೆ ಇವೆಲ್ಲವೂಗಳು " ಹಿಂದು ಧರ್ಮದ" ಪ್ರತೀಕಗಳು. ಆದ್ದರಿಂದ "ವೀರಶೈವ- ಲಿಂಗಾಯತ" ಒಂದು "ಹಿಂದು ಧರ್ಮದ" ವಿಶಿಷ್ಟ ಭಾಗ.

ವೀರಶೈವ - ಲಿಂಗಾಯತ ಧರ್ಮ ಪ್ರಸಾರದ ಪ್ರಮುಖ ಕೇಂದ್ರ ಸ್ಥಾನಗಳು ಮತ್ತು ಪ್ರಮುಖ ಧರ್ಮ ಪ್ರಸಾರಕರು.

1) ಶ್ರೀಶೈಲ - ಶ್ರೀ ಚಂದ್ರಗುಂಡ ದೇಶಿಕೇಂದ್ರ ಶಿವಾಚಾರ್ಯರು 2) ಪೊಟ್ಟಲಕೆರೆ (ಪೊಟ್ಲುಚೇರು)- ಶ್ರೀ ದೇವರ (ಜೇಡರ) ದಾಸಿಮಯ್ಯನವರು 3) ಮುದನೂರು - ಶ್ರೀ ದೇವರ (ಜೇಡರ) ದಾಸಿಮಯ್ಯನವರು 4) ಕೊಲ್ಲಿಪಾಕಿ ಮತ್ತು ಮಂಗಳವೇಡೆ - ಶ್ರೀ ರೇವಣ ಸಿದ್ಧೇಶ್ವರರು 5) ಬಸವ ಕಲ್ಯಾಣ - ಶ್ರೀ ಬಸವಣ್ಣನವರು.

🌷ವೀರಶೈವ🌷
ಬ್ರಹ್ಮ ವಿಷ್ಣು ಮಹೇಶ್ವರ ಹಿಂದು ಧರ್ಮದ ತ್ರಿಮೂರ್ತಿಗಳು. ಬ್ರಹ್ಮನಿಗೆ ಪೂಜೆ ಇಲ್ಲ ಇನ್ನು ವಿಷ್ಣುವಿನ ಆರಾಧಕರು "ವೈಷ್ಣವರು" ಮತ್ತು ಶಿವನ ಆರಾಧಕರು "ಶೈವರು". ಶೈವರಲ್ಲಿಯ ಬ್ರಾಹ್ಮಣೇತರು ವೇದಗಳು ಮತ್ತು ವೈದಿಕ ಅಂಶಗಳನ್ನು ಹಾಗೂ ಚಾತುರ್ವರ್ಣಗಳನ್ನು ಖಂಡಿಸಿ "ವೀರಶೈವ"ರಾದರು. ಚಾತುರ್ವರ್ಣಾತೀತನೇ ವೀರಶೈವ ಎಂದು ಸಿದ್ಧರಾಮರು ಹೇಳಿರುತ್ತಾರೆ. ಚಾತುರ್ವರ್ಣದ ವಿರುದ್ಧ ಸಿಡಿದೆದ್ದ ಶೈವರನ್ನು "ವೀರಶೈವ" ರೆಂದು ಸಂಬೋಧಿಸಿರಬಹುದು. ಮುಂದೆ ಅದು "ವೀರಶೈವ ಧರ್ಮ" ಆಗಿರುತ್ತದೆ. "ವೀರಶೈವ ಧರ್ಮದ ತತ್ವಗಳು" ಅದರ ಆಧಾರಗಳು. "ಲಿಂಗ-ದೀಕ್ಷೆ" ಗೆ ಶಿವ ದೀಕ್ಷೆ, ಶೈವ ದೀಕ್ಷೆ, ಮಾಹೇಶ್ವರ ದೀಕ್ಷೆ ಮತ್ತು "ವೀರಶೈವ ದೀಕ್ಷೆ" ಎಂದು ಕರೆಯುತ್ತಾರೆ. "ವೀರಶೈವ ದೀಕ್ಷೆ" ಸ್ವೀಕರಿಸಿದವರನ್ನು "ವೀರಶೈವ"ರು ಎನ್ನುತ್ತಾರೆ. "ರೇಣುಕಾಚಾರ್ಯ"ರು ಆಂಧ್ರದ ಕೊಲ್ಲಿಪಾಕಿಯಲ್ಲಿ 18 ಜಾತಿಯ ವೀರಶೈವರಿಗೆ ಮಠಗಳನ್ನು ಮಾಡಿಕೊಟ್ಟಿರುತ್ತಾರೆ. ಆದ್ದರಿಂದ "ರೇಣುಕಾಚಾರ್ಯ" ರು ವೀರಶೈವರ "ಜಗದ್ಗುರು"ಗಳಾಗಿರುತ್ತಾರೆ‌.

🌷ಲಿಂಗಾಯತ🌷
"ಲಿಂಗಾಯತ" ಎನ್ನುವುದು "ಲಿಂಗ-ದೀಕ್ಷೆ" ಪಡೆದು "ಲಿಂಗ ಧಾರಣೆ" ಮಾಡಿದ ನಂತರ ಬಳಸಿರುವ ಪದ. ಲಿಂಗವನ್ನು ಆಯತ ಮಾಡಿಕೊಂಡವ, ಲಿಂಗವನ್ನು ಸ್ವೀಕರಿಸಿದವ, ಲಿಂಗ ಧರಿಸಿದವ, ಲಿಂಗವಂತ, "ಲಿಂಗಾಯತ", "ಲಿಂಗಾಯತ"ರು ಎಂದು ಆಗಿರುತ್ತದೆ. ಹೀಗೆ "ಲಿಂಗ" ಹಾಕಿಕೊಳ್ಳುತ್ತಿರುವವರನ್ನು ಆಡು ಭಾಷೆಯಲ್ಲಿ "ಲಿಂಗಾಯತ" ರು ಎನ್ನುತ್ತಾರೆ. ಬಸವಣ್ಣನವರ "ಕಲ್ಯಾಣ ಕ್ರಾಂತಿ" ಯಿಂದ ವರ್ಣರಹಿತ ಮತ್ತು ಜಾತಿ ರಹಿತವಾಗಿ ಎಲ್ಲರೂ "ಲಿಂಗ ದೀಕ್ಷೆ" ಹೊಂದಿ "ಲಿಂಗಾಯತ" ರಾಗಿರುತ್ತಾರೆ. ಆದ್ದರಿಂದ ಬಸವಣ್ಣನವರು "ಲಿಂಗಾಯತ ಧರ್ಮ ಗುರುಗಳು" ಆಗಿರುತ್ತಾರೆ.

ಬಸವ ಪೂರ್ವದ ಶರಣ ಆದ್ಯ ವಚನಕಾರ ಶ್ರೀ ದೇವರ (ಜೇಡರ) ದಾಸಿಮಯ್ಯನವರು ಶ್ರೀಶೈಲ ಕಾಡಿನಲ್ಲಿ ಬೇಡರಿಗೆ ನಂದ್ಯಾಲ ಎಂಬ ಗ್ರಾಮದಲ್ಲಿ ಬ್ರಾಹ್ಮಣರಿಗೆ ಗೌಡಗೆರೆ ಎಂಬ ಗ್ರಾಮದಲ್ಲಿ ಮುದ್ದಯ್ಯನೆಂಬ ಗೌಡ ಒಕ್ಕಲಿಗನಿಗೆ ಮತ್ತು ಅವನ ಜಾತಿಯ 12,000 ಜನರಿಗೆ, ನೇಕಾರ ಸಮುದಾಯಗಳಿಗೆ ಹಾಗೂ ಜೈನರಾಜ ಜಯಸಿಂಹ ಮತ್ತು ಅವನ ಪತ್ನಿ ಸುಗ್ಗಳೆ ಹಾಗೂ 20,000 ಜೈನರಿಗೆ ಶಿವ ದೀಕ್ಷೆಯನ್ನು ಕೊಟ್ಟು ಶೈವರನ್ನಾಗಿ ಮಾಡಿರುತ್ತಾರೆ ಮತ್ತು 700 ಜೈನ ದೇವಾಲಯಗಳನ್ನು ಶಿವಾಲಯಗಳನ್ನಾಗಿ ಮಾಡಿರುತ್ತಾರೆ. ಶ್ರೀ ದೇವರ ದಾಸಿಮಯ್ಯನವರು ಹಾಸನ ಜಿಲ್ಲೆಯ ಹಿರಿಯೂರು ತಾಲ್ಲೂಕಿನವರೆಗೆ ಸಂಚಾರ ಮಾಡಿ ಧರ್ಮ ಪ್ರಸಾರ ಕಾರ್ಯ ಮಾಡಿರುತ್ತಾರೆ.

ಲಿಂಗಾಯತವು ಆಚಾರ ಸೂಚಕವಾಗಿರುತ್ತದೆ ಮತ್ತು ವೀರಶೈವವು ಧರ್ಮ ಸೂಚಕವಾಗಿರುತ್ತದೆ.
ವೀರಶೈವ - ಲಿಂಗಾಯತ ಧರ್ಮದ ವಂಶವೃಕ್ಷ :
ಹಿಂದು ಧರ್ಮ ---> ಶೈವ ಮತ್ತು ವೈಷ್ಣವ. ಶೈವ ---> ವೀರಶೈವ ಮತ್ತು ಲಿಂಗಾಯತ.

Last 30 Records

Day Members Gain % Gain
July 16, 2024 294 +4 +1.4%
April 19, 2024 290 +6 +2.2%
February 10, 2024 284 +6 +2.2%
December 27, 2023 278 +1 +0.4%
November 13, 2023 277 +4 +1.5%
October 13, 2023 273 +2 +0.8%
September 14, 2023 271 +5 +1.9%
August 16, 2023 266 +3 +1.2%
July 14, 2023 263 +4 +1.6%
June 20, 2023 259 -6 -2.3%
March 19, 2023 265 0 0.0%
March 03, 2023 265 +5 +2.0%
January 24, 2023 260 +2 +0.8%
January 20, 2023 258 +1 +0.4%
January 09, 2023 257 +1 +0.4%
January 05, 2023 256 -1 -0.4%
December 24, 2022 257 +1 +0.4%
December 21, 2022 256 +3 +1.2%
November 25, 2022 253 +1 +0.4%
November 06, 2022 252 +2 +0.8%
October 31, 2022 250 +2 +0.9%
October 24, 2022 248 +1 +0.5%
October 18, 2022 247 +7 +3.0%
October 11, 2022 240 +3 +1.3%
September 06, 2022 237 +2 +0.9%
August 28, 2022 235 +2 +0.9%
August 21, 2022 233 +1 +0.5%
July 26, 2022 232 +2 +0.9%
July 20, 2022 230 +1 +0.5%
July 13, 2022 229 +3 +1.4%

Charts

Some Club Members

More Clubs