ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ, ಕಡಲನು ಕೂಡಬಲ್ಲೆನೆ ಒಂದು ದಿನ...
ಹುಟ್ಟಿದ್ದು ಒಬ್ಬ ದೇವತಾ ಮನುಷ್ಯ ಹುಟ್ಟಿದ ದಿನ ಹಾಗಂತ ನಾನೇನು ದೇವತಾ ಮನುಷ್ಯ ಅಲ್ಲ ಬಿಡಿ...
ನಮ್ಮೂರು ಬೆಂಗಳೂರು..
ಕವನ ಕವಿತೆ ಅಂತಾ ಏನು ಅಲ್ಲ ಸುಮ್ಮನೆ ತಲೆಗೆ ಬಂದಿದ್ದು ಬರಿಯೋದು.. ನನ್ನ ಜೀವನದ ಅನುಭವಗಳನ್ನು ಕವಿತೆಯ ರೂಪದಲ್ಲಿ ಬರೆಯುವ ಪ್ರಯತ್ನ ಅಷ್ಟೇ..
ನೋವಿನಲ್ಲಿ ಇರುವವರಿಗೆ ನನ್ನ ಕೈಲಾದ ಸಹಾಯ ಮಾಡಬೇಕು ಅಂತಾ ಆಸೆ.. ನಾನು ಬದುಕಲ್ಲಿ ಒಂದು ಸಮಯದಲ್ಲಿ ಸಾಯುವ ಮನಸ್ಥಿತಿಯಲ್ಲಿ ಆತ್ಮಹತ್ಯೆ ನಿರ್ಧಾರ ಕೂಡ ಮಾಡಿದ್ದೆ. ಅದರಿಂದ ಹೊರ ಬಂದಿದೆ ಒಂದು ಸಾಹಸ. ಅಂತಹ ವ್ಯಕ್ತಿಗಳು ನಮ್ಮ ಮಧ್ಯದಲ್ಲಿ ತುಂಬಾ ಜನ ಇದ್ದಾರೆ, ಅವರಿಗೆ ನಮ್ಮ ಸಹಾಯ ಅಗತ್ಯ.. ಎರಡು ನಿಮಿಷ ಅವರ ಜೊತೆ ಮಾತಾಡಿ ಧೈರ್ಯ ತುಂಬುವ ಕೆಲಸ ಮಾಡೋಣ.. ಒಂದು ಜೀವಕ್ಕೆ ಅಸರೆಯ ಮಾತಾನಾಡೋಣ... ನಮ್ಮ ಸ್ನೇಹ ಮತ್ತು ಪ್ರೀತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡೋಣ.. ಎಲ್ಲರೊಳಗೆ ಒಂದಾಗಿ ಬದುಕೋಣ.. ಇರುವುದು ಮೂರು ದಿನ ಸಂತೋಷದಿಂದ ಒಟ್ಟಿಗೆ ಸ್ನೇಹದಿಂದ ಪ್ರೀತಿಯಿಂದ ಬದುಕೋಣ...
ಯಾರಿಗಾದರೂ ನನ್ನಿಂದ ಸಹಾಯ ಬೇಕು ಅಂದ್ರೆ ಯೋಚಿಸೋದೆ ಬೇಡ ಕಾಲ್ ಮಾಡಿ ಇಲ್ಲ ಮೆಸೇಜ್ ಮಾಡಿ.. ನೋವಿದ್ದರೆ ಎರಡು ನಿಮಿಷ ನನ್ನ ಜೊತೆ ಮಾತಾಡಿ ಮನಸು ಹಗುರಾಗಿಸಿಕೊಳ್ಳಿ ಅಷ್ಟೇ.. ಕಷ್ಟ ಯಾರಿಗೆ ಇರೋಲ್ಲ ಹೇಳಿ... ಎಲ್ಲದಕ್ಕೂ ಪರಿಹಾರ ಇರುತ್ತೆ ನಾವು ಹುಡುಕಬೇಕು ಅಷ್ಟೇ.. ಧೈರ್ಯವಾಗಿರೋಣ.. ಪ್ರೀತಿ ಹಂಚೋಣ... ಸಂತೋಷದಿಂದ ಇರೋಣ...
💻 [email protected]
📱 9986436000