Prasanna Shakya on Clubhouse

Updated: Sep 1, 2023
Prasanna Shakya Clubhouse
109 Followers
157 Following
@prasannarakkasa Username

Bio

ಸಜ್ಜನ ರಂತೆ ನಟಿಸುವ ದುರ್ಜನ
ದುರ್ಜನ ಸಂಗವ ಬಯಸುವ ಸಜ್ಜನ

*_EVM ಬಗ್ಗೆ ಯಾವ ಪಕ್ಷಕ್ಕೂ ವಿಶ್ವಾಸ ವಿಲ್ಲ. ಆದರೆ ಯಾವ ಪಕ್ಷವೂ ಅದನ್ನು ವಿರೋಧಿಸುವುದಿಲ್ಲ!_*

_ರವೀಶ್ ಕುಮಾರ್_ _(ವಾರ್ತಾ ಭಾರತಿ)_

_2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಡ್ವಾಣಿ ಅವರು EVM ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದರು. ಆಮೇಲೆ ಅಡ್ವಾಣಿ ನಿಧಾನವಾಗಿ ತಮ್ಮ ಪಕ್ಷದಲ್ಲೇ ಸೈಡ್ ಲೈನ್ ಆದರು._

_ಇನ್ನು ಸಂಘದ ಬುದ್ಧಿಜೀವಿ ಇಲೆಕ್ಷನ್ ಅನಲಿಸ್ಟ್ ಜಿವಿಎಲ್ ನರಸಿಂಹ ರಾವ್ ಅವರು 2010 ರಲ್ಲಿ EVM ಬಳಕೆಯ ವಿರುದ್ಧ ಒಂದು ಪುಸ್ತಕವನ್ನೇ ಬರೆದರು. ಅದನ್ನು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ ಬಿಡುಗಡೆ ಮಾಡಿದರು. ಆಮೇಲೆ ಸಂಘದ ಸಂಪೂರ್ಣ ಬೆಂಬಲ ಹಾಗು ಪ್ರಯತ್ನದ ಹೊರತಾಗಿಯೂ ಗಡ್ಕರಿಗೆ ಬಿಜೆಪಿ ಅಧ್ಯಕ್ಷರಾಗಿ ಇನ್ನೊಂದು ಅವಧಿ ಸಿಗಲಿಲ್ಲ. ಅದಕ್ಕೆ ಕಾರಣ ಬೇರೆ ಏನನ್ನೋ ನೀಡಲಾಯಿತು._

_2017 ರಲ್ಲಿ ಪಂಜಾಬ್ ಚುನಾವಣೆಯ ಬಳಿಕ ಆಮ್ ಆದ್ಮಿ ಪಕ್ಷ EVM ಬಗ್ಗೆ ಪ್ರಶ್ನೆ ಎತ್ತಿತು. ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಅವರು ವಿಧಾನ ಸಭಾ ಅಧಿವೇಶನದಲ್ಲೇ EVM ಅನ್ನು ಹ್ಯಾಕ್ ಮಾಡಿ ತೋರಿಸಿದರು. ಯಾವುದೇ ಚುನಾವಣೆಯ ಎರಡು ಗಂಟೆಗಳ ಮೊದಲು ನಮಗೆ ಎಲ್ಲ EVM ಕೊಟ್ಟರೆ ವಿಧಾನಸಭೆ ಬಿಡಿ ಒಂದು ಬೂತ್ ಕೂಡ ಗೆಲ್ಲಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಆಮೇಲೆ ಅದೇನಾಯಿತೋ ಗೊತ್ತಿಲ್ಲ, ಸೌರಭ್ ಭಾರದ್ವಾಜ್ ಮತ್ತೆಂದೂ EVM ಬಗ್ಗೆ ಚಕಾರ ಎತ್ತಲೇ ಇಲ್ಲ._

_ಇದಾದ ಮೇಲೆ ಚುನಾವಣಾ ಆಯೋಗ ಒಂದು ಹ್ಯಾಕಥಾನ್ ಡ್ರಾಮಾ ಮಾಡಿಸಬೇಕಾಯಿತು. ಅದರಲ್ಲಿ ಯಾರಾದರೂ ಬಂದು EVM ಹ್ಯಾಕ್ ಮಾಡಿ ತೋರಿಸಿ ಎಂದು ಆಹ್ವಾನ ನೀಡಲಾಯಿತು. EVM ಅನ್ನು ಮುಟ್ಟದೆ ಅದನ್ನು ನೀವು ಹ್ಯಾಕ್ ಮಾಡಬೇಕು ಎಂದು ಬಹಳ ಸುಂದರ ಷರತ್ತನ್ನು ಚುನಾವಣಾ ಆಯೋಗ ವಿಧಿಸಿತ್ತು. EVM ಅನ್ನು ಯಾರಾದರೂ ಕಣ್ಸನ್ನೆಯಿಂದ ಸೆಟ್ ಮಾಡಲು ಸಾಧ್ಯವೇ ? ನೀವೇ ಹೇಳಿ ? ಈ ಶರತ್ತಿನಿಂದಾಗಿ ಯಾರೂ ಅದನ್ನು ಹ್ಯಾಕ್ ಮಾಡಲು ಆಗಲಿಲ್ಲ. ಹಾಗಾಗಿ EVM ಪರಿಶುದ್ಧ ಎಂದು ಘೋಷಿಸಲಾಯಿತು._

_ಸುಪ್ರೀಂ ಕೋರ್ಟ್ ಪ್ರತಿ EVM ನಲ್ಲಿ VVPAT ಹಾಕುವಂತೆ ಆದೇಶ ನೀಡಿತು. ಆಮೇಲೆ VVPAT ನಿಂದ ಪ್ರಿಂಟ್ ಬರುತ್ತಿತ್ತು ಆದರೆ ಅದನ್ನು ಎಣಿಸುತ್ತಿರಲಿಲ್ಲ. ಮತ್ತೆ ಯಾರೋ ಸುಪ್ರೀಂ ಕೋರ್ಟ್ ಹೋದರು. ಆಗ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಬೂತ್ ಗಳ VVPAT ಪ್ರಿಂಟ್ ಔಟ್ ಅನ್ನು EVM ಲೆಕ್ಕದೊಂದಿಗೆ ತಾಳೆ ಹಾಕಬೇಕು ಎಂದು ಆದೇಶ ನೀಡಿತು. ಆದರೆ ಪ್ರತಿ ಚುನಾವಣೆಯಲ್ಲಿ ಆ ತಾಳೆ ಹಾಕುವುದೇ ಇಲ್ಲ ಅಥವಾ ಕೊನೆಯಲ್ಲಿ ಹಾಕಲಾಗುತ್ತದೆ. ಆಗ ಫಲಿತಾಂಶ ಸ್ಪಷ್ಟವಾಗಿ ಸರಕಾರ ಯಾರದ್ದು ಬರಲಿದೆ ಎಂಬುದು ಗೊತ್ತಾಗಿರುತ್ತದೆ. ಹಾಗಾಗಿ ಸೋಲುವ ಅಭ್ಯರ್ಥಿ ಅಧಿಕಾರಿಗಳ ಒತ್ತಡಕ್ಕೆ ಸುಮ್ಮನಾಗುತ್ತಾನೆ._

_2019 ರಲ್ಲಿ 370 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಚಲಾವಣೆಯಾದ ಮತ ಹಾಗು ಲೆಕ್ಕಕ್ಕೆ ಸಿಕ್ಕಿದ ಮತಗಳು ತಾಳೆಯಾಗಲಿಲ್ಲ. ಇದರಿಂದ ದೊಡ್ಡ ಕೋಲಾಹಲವಾಯಿತು. ಚುನಾವಣಾ ಆಯೋಗ ತನ್ನ ವೆಬ್ ಸೈಟ್ ನಲ್ಲಿದ್ದ ಚಲಾವಣೆಯಾದ ಮತಗಳ ಲೆಕ್ಕವನ್ನೇ ತೆಗೆದುಹಾಕಿತು. ಉತ್ತರ ಪ್ರದೇಶದ ಬದಾಯುನ್ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಮತ ಹಾಗು ಲೆಕ್ಕ ಮಾಡಿದ ಮತಗಳ ನಡುವೆ 25 ಸಾವಿರಕ್ಕೂ ಹೆಚ್ಚು ಅಂತರವಿತ್ತು. ಈ ಬಗ್ಗೆ ಎಸ್ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಹೈಕೋರ್ಟ್ ಮೆಟ್ಟಲೇರಿದರು. ಆದರೆ ಆಮೇಲೆ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ. ಧರ್ಮೇಂದ್ರ ಯಾದವ್ ಕೂಡ ಈ ಬಗ್ಗೆ ತುಟಿ ಬಿಚ್ಚಿಲ್ಲ._

_ಈಗ EVM ನ ಅತ್ಯಂತ ಕ್ಲಾಸಿಕ್ ಕೇಸು ಹೇಳುತ್ತೇನೆ ಕೇಳಿ. ಕೆಲವೇ ತಿಂಗಳುಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹಾಗು ಕಾಂಗ್ರೆಸ್ ನಾಯಕ

Last 10 Records

if the data has not been changed, no new rows will appear.

Day Followers Gain % Gain
September 01, 2023 109 +5 +4.9%
August 27, 2022 104 +2 +2.0%
July 21, 2022 102 -1 -1.0%
June 14, 2022 103 -4 -3.8%
May 08, 2022 107 +1 +1.0%
March 31, 2022 106 +2 +2.0%
February 01, 2022 104 +1 +1.0%

Charts

Member of

More Clubhouse users