laxmi prasad on Clubhouse

Updated: Oct 25, 2023
laxmi prasad Clubhouse
673 Followers
567 Following
Jun 15, 2021 Registered
@laxmigprasad Username

Bio

ಕರಾವಳಿಯ ಸಾವಿರದೊಂದು ದೈವಗಳು
ಕೃತಿಗಾಗಿ 9480516684 ಗೆ ವಾಟ್ಸಪ್ ಮೆಸೇಜ್ ಮಾಡಿ ಅಥವಾ ಕರೆ ಮಾಡಿ

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು .ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಮುನ್ನೂ ಮೂವತ್ತು ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು
ಡಾ‌‌.ನಾ ಮೊಗಸಾಲೆ ,


ಇಪ್ಪತ್ತು ವರ್ಷಗಳ ಕ್ಷೇತ್ರ ಕಾರ್ಯ ಅಧ್ಯಯನದಿಂದ ಕಾರವಾರದಿಂದ ಕಣ್ಣನ್ನೂರು ಕೊಡಗು ಸೇರಿದಂತೆ ಆರಾಧನೆ ಪಡೆವ ಕನ್ನಡ ತುಳು ಮಲೆಯಾಳ ಕೊಡವ ಭಾಷೆಯನ್ನಾಡುವ ಸಾವಿರಕ್ಕಿಂತ ಹೆಚ್ಚಿನ ದೈವಗಳ ಮಾಹಿತಿ ಇರುವ A4 ಸೈಜಿನಲ್ಲಿ ಸಾವಿರದಷ್ಟು ಪುಟಗಳ ಸಚಿತ್ರ ಮಾಹಿತಿಯ ಬೃಹತ್ ಕೃತಿ ಇದು


- ಡಾ.ಲಕ್ಷ್ಮೀ ಜಿ ಪ್ರಸಾದ್ ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಬ್ಯಾಟರಾಯನಪುರ,ಬೆಂಗಳೂರು ಕಾಸರಗೋಡಿನ ಕೋಳ್ಯೂರು ನನ್ನ ತವರೂರು,ಈಗಾಗಲೇ ತುಂಡು ಭೂತಗಳು,ತುಳುನಾಡಿನ ಅಪೂರ್ವ ಭೂತಗಳು,ಭೂತಗಳ ಅದ್ಬುತ ಜಗತ್ತು ,ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು,ಕಂಬಳ ಕೋರಿ ನೇಮ,ಪಾಡ್ದನ ಸಂಪುಟ ,ಚಂದಬಾರಿ ರಾಧೆ ಗೋಪಾಲ‌ಮತ್ತು ಇತರ ಪಾಡ್ದನಗಳು,ದೈವಿಕ ಕಂಬಳ ಕೋಣ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು,
ಅರವಿನಂಗಳದ ಸುತ್ತ,ಮನೆಯಂಗಳದಿ ಹೂ,ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಮೊದಲಾದ ಇಪ್ಪತ್ತೆರಡು ಕೃತಿಗಳು,ಅನೇಕ ಬರಹಗಳು ಪ್ರಕಟವಾಗಿವೆ
ನನ್ನ ಬ್ಲಾಗ್ ಭೂತಗಳ ಅದ್ಭುತ ಜಗತ್ತು http:// laxmipras.blogspot.com

Invited by: Anindith Gowda

Last 10 Records

if the data has not been changed, no new rows will appear.

Day Followers Gain % Gain
October 25, 2023 673 +20 +3.1%
January 06, 2023 653 +3 +0.5%
September 22, 2022 650 +3 +0.5%
June 29, 2022 647 -1 -0.2%
May 22, 2022 648 +5 +0.8%
April 14, 2022 643 +5 +0.8%
February 20, 2022 638 +17 +2.8%
January 09, 2022 621 +8 +1.4%
December 02, 2021 613 +13 +2.2%
October 24, 2021 600 +33 +5.9%

Charts

Member of

More Clubhouse users