ಮತ್ತೆ ಮತ್ತೆ ಕಾಲ ಮೈನೆರೆಯುತ್ತದೆ
ಹಿಂದಿನದ್ದೆಲ್ಲಾ ಸ್ರವಿಸುತ
ತನ್ನನ್ನು ಆಗಿಂದಾಗ್ಗೆ ಖಾಲಿ ಮಾಡಿಕೊಳ್ಳುತಾ
ಮತ್ತೆ ಮತ್ತೆ ಕಾಲ ಮೈನೆರೆಯುತ್ತದೆ
ಯಾರಿಗೂ ಹೇಳುವುದಿಲ್ಲ
ಯಾರನ್ನೂ ಕೇಳುವುದಿಲ್ಲ
ಪಾರ್ಕಿನಲ್ಲಿ ನಿಲ್ಲುವ 'use me' ಗೊಂಬೆಗೆ ಮಾತ್ರ
ಅದು ಅರಿವಿಗೆ ಬರಬಹುದು
ಜೀವದ ಚಲನ
ನಿರ್ಜೀವದ ಅರಿವಿಗೇ ಸದಾ ಬರುವುದಂತೆ
ಅದರಂತೆಯೇ ನಿರ್ಜೀವte ಅನುಭವಿಸುವ ಏಕಮಾತ್ರ
ಸಾಧನವು ಈ 'ಕಾಲವೇ'
ಕಾಲದ ಕಣ್ಣಿಗೆ
ಎಲ್ಲವೂ ನಿರ್ಜೀವವೇ !?
ಎಂದು ಕೇಳಬಹುದು
ಹೌದು ಎಲ್ಲಕ್ಕಿಂತಲೂ ಕಾಲ ವೇಗವಾಗಿ ಓಡುವುದರಿಂದ
ಜೀವಿಗಳ ಚಲನ ಕಾಲಕ್ಕೆ ಕಾಣುವುದಿಲ್ಲ
ಅದರ ಕಣ್ಣಿಗೆ ಜೀವಯೂ ನಿರ್ಜೀವವೇ
ಆಗ್ಗಿಂದಾಗ್ಗೆ ಮೈನೆರೆಯುವ ಕಾಲಕ್ಕೆ ಮುಪ್ಪೆಂಬುದಿಲ್ಲ
ಅದು ಹುಟ್ಟುತ್ತಲೇ ಮೈನೆರೆದಿತ್ತು
ಅಥವಾ ಮೈನೆರೆದುದರಿಂದಲೇ ಹುಟ್ಟಿತ್ತು
ಯವ್ವನದಲ್ಲೇ ಹುಟ್ಟಿ ಯವ್ವನದಲ್ಲೇ
ಮುಗಿಯುವ ಕಾಲವ
ಭೂತ ಭವಿಷ್ಯತ್ ವರ್ತಮಾನಗಳ
ತಕ್ಕಡಿಗೆ ಹಾಕಿ ತೂಗಿ ನೋಡಲು ಸಾಹಸ
ಪಟ್ಟು ಸೋಲುತ್ತಲೇ ಹೋಗುವವರ
ಮೆದುಳು ವಿಕಸನ ಹೊಂದಿದ ಜೀವಿಗಳು
ಸಂಪೂರ್ಣ ಬದುಕು ಬದುಕಿದ್ದೀನ?
ಎಲ್ಲವೂ ಇನ್ನು ಸಾಕು
ಎಂದನಿಸಿದಾಗ;
ನಿಜಕ್ಕೂ ನಾನು ಸಂಪೂರ್ಣ ಬದುಕು ಬದುಕಿದ್ದೀನ?
ಪ್ರತೀ ಬಾರಿ ಹುಟ್ಟುವ ಪ್ರಶ್ನೆ ಇದೇ
ಯಾರಾದರೂ ಎಂದಾದರೂ ಸಂಪೂರ್ಣ ಬದುಕು ಬದುಕಿಯಾರ???
ಅಸಲಿಗೆ ಸಂಪೂರ್ಣವಾಗಿ ಬದುಕುವುದು ಅಂದರೇನು?
ಕೆಲವು ಕ್ಷಣಗಳು ಏನೋ ದೊಡ್ಡದು ಘಟಿಸಿದೆ ಅಥವಾ ಮಾಡಿದೆ ಎಂದು ಖುಷಿ ಪಟ್ಟು ಸಂಪೂರ್ಣ ಬದುಕುವುದೆ?
ಆದರೆ.......... ಅದು ಆ ಕ್ಷಣ ಅಷ್ಟೇ!
ನಂತರ ಮತ್ತೆ ಎಲ್ಲವೂ ಸಾಕೆನಿಸಬಹುದು
ಬೇಕೆನಿಸಬಹುದು
ಬದುಕಬೇಕು! ಯಾತಕ್ಕೆ???
ಬದುಕನ್ನು ಸಂಪೂರ್ಣ ಬದುಕಲು;
ನಿಜಕ್ಕೂ ಇದು ಹಾಸ್ಯವೆನಿಸುವುದು...
ಮತ್ತೆ ಬೇರೆ ಉತ್ತರ ಹುಡುಕು...?
ಸರಿ ಬದುಕಬೇಕು,
'ಪರರಿಗೆ ಉಪಕಾರಿಯಾಗಲು'
ಈ ತನು ಮನ ಇರುವುದು ಅದಕ್ಕೆ;
ಸರಿ, ಹಾಗಾದರೆ ಈ 'ನಾನು'
ಎಂಬ ಪದ ಯಾಕೆ?
ಶಕ್ತಿ ಇರುವುದು ನನ್ನಲ್ಲೇ...
ಶಕ್ತಿ ಹುಟ್ಟುವುದು ನನ್ನಲ್ಲೇ...
ಅದಕ್ಕೆ ನಾನು...
ಆದರೆ ಈ ಶಕ್ತಿ ಮಾತ್ರ ಪರರ ಉಪಕಾರಕ್ಕೆ! ಅದು ಹೇಗೆ?
ಅದು ಹಾಗೆ ಇಲ್ಲಿ
ಎಲ್ಲವೂ ನಿನ್ನದೇ ಆದರೂ ಯಾವುದೂ ನಿನ್ನದಲ್ಲ
ಎಲ್ಲಾ ತಲೆಕೆಳಗಾಗಿ ಕಾಲು ಮೇಲಾಗಿರಬಹುದು...
ಒಂದನ್ನು ನೋಡಲು ಮತ್ತೊಂದು
ತಿರುಗಿಸಬೇಕು ಉರುಳಿಸಬೇಕು ಮರಳಬೇಕು
ಅದು ನೋಡನೋಡುತ್ತಿದ್ದಂತೆ ಮತ್ತಿನೇನೋ ಹುಡುಕಬೇಕು....!
ಹುಡುಕುವುದೇ ಇಲ್ಲಿ ಕೆಲಸ
ಏನಾದರು ಸಿಗುತ್ತದೋ ಇಲ್ಲವೋ
ಹುಡುಕುತ್ತಾ ಹೋಗ್ಬೇಕಷ್ಟೇ ಒಂದಿಲ್ಲೊಂದನ್ನು
ನಿನ್ನ ಪಾಡಿಗೆ ನೀನು...
🤣😅😁😄😃😆😜😛😝
🤪😜😋🤩😊😇😚🤩🙂🙃😆
😜😝😚😇😘😋😂😊😇🥰😝
😛😗😇🤑😜🙂🙃😊😇😚😝😛😚
if the data has not been changed, no new rows will appear.
Day | Followers | Gain | % Gain |
---|---|---|---|
October 16, 2023 | 25 | +2 | +8.7% |
June 05, 2022 | 23 | -3 | -11.6% |
March 21, 2022 | 26 | +1 | +4.0% |