ಉಭಯ ಕುಶಲೋಪರಿ on Clubhouse

ಉಭಯ ಕುಶಲೋಪರಿ Clubhouse
336 Members
Updated: Mar 12, 2024

Description

ಆತ್ಮೀಯರೇ ನಮಸ್ಕಾರ...!

ಇತ್ತೀಚಿನ ದಿನಗಳಲ್ಲಿ ಚರ್ಚೆಯ ವೇದಿಕೆಯಾಗಿ ಕ್ಲಬ್ ಹೌಸ್ ರೂಪುಗೊಂಡಿದೆ. ಇದುವರೆಗೂ ವಾಟ್ಸಪ್, ಕಾನ್ಫರೆನ್ಸ್ ಕಾಲ್‌ಗಳ ಮೂಲಕ ಇಂಥ ವೇದಿಕೆಯನ್ನು ರೂಪಿಸಿಕೊಳ್ಳಬಹುದಾಗಿದ್ದರೂ ಅದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಆದರೆ ಈ ಕ್ಲಬ್ ಹೌಸ್ ಇಂಥ ವೇದಿಕೆಯನ್ನು ನಿರ್ಮಿಸಿಕೊಡಲು ತಯಾರಾದಂಥ ಒಂದು ಆ್ಯಪ್. ಹೀಗಾಗಿ ನಾನು ಹಲವಾರು ದಿನಗಳ ಅನುಭವದ ಬಳಿಕ ಈ ಮಾತನ್ನು ಹೇಳುತ್ತಿದ್ದೇನೆ. ಇದೇ ಕಾರಣಕ್ಕೆ ಇವತ್ತು ಇದನ್ನು ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ಎಷ್ಟೋ ಕಡೆಗಳಲ್ಲಿ 'ಕೆಲಸವಿಲ್ಲದವರು ಕುಟ್ಟುವ ತೌಡಿಗೆ ಇದು ವೇದಿಕೆ' ಅನ್ನೋ ಮಾತು ಕೇಳಿ ಬಂದರೂ ಅದು ಅವರ ವೈಯಕ್ತಿಕ ಅಭಿಪ್ರಾಯ ಅಂದುಕೊಳ್ಳಬೇಕೇ ಹೊರತು ನಾವು ಕೂಡ ಅವರೊಂದಿಗೆ ದನಿ ಸೇರಿಸೋ ಅಗತ್ಯವಿಲ್ಲ. ಇದನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಇದೀಗ ಈ ವೇದಿಕೆಯನ್ನು ನಮ್ಮ ಉಭಯ ಕುಶಲೋಪರಿ ಗ್ರುಪ್ ಸದಸ್ಯರೊಂದಿಗೆ ಹರಟಲು ಬಳಸಿಕೊಳ್ಳಬೇಕೆನ್ನುವುದು ನನ್ನ ಆಶಯ. ಏಕೆಂದರೆ ಒತ್ತಡದ ಬದುಕಿನಲ್ಲಿ ಪರಸ್ಪರ ಸುಖ, ಸಂತೋಷ, ದುಃಖ, ನೋವು, ನಲಿವು ಹಂಚಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸಧ್ಯಕ್ಕೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನುವದರ ಬಗ್ಗೆಯೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಈ ಕ್ಲಬ್ ಹೌಸ್ ವೇದಿಕೆ ತುಂಬಾನೇ ಪ್ರಯೋಜನಕಾರಿ ಎನ್ನಿಸಿದೆ. ಇದೇ ಕಾರಣಕ್ಕೆ ನಮ್ಮೆಲ್ಲರ ನಡುವೆ ಚರ್ಚೆಗಳಾಗಲಿ, ಜೋಕ್‌ಗಳು ಹರಿದಾಡಲಿ ಅನ್ನುವುದು ನನ್ನ ಉದ್ದೇಶ. ವಾರಕ್ಕೆ ಒಂದು ಬಾರಿ ಒಂದೊಂದು ವಿಷಯದ ಬಗ್ಗೆ ಚರ್ಚೆ ನಡೆಯಲಿ ಅನ್ನುವುದು ನನ್ನ ಅಭಿಪ್ರಾಯ. ಈಗಾಗಲೇ ಗ್ರುಪ್‌ನ ಹಲವು ಮಿತ್ರರೊಂದಿಗೆ ಚರ್ಚೆ ಮಾಡಲಾಗಿದ್ದು, ಅವರು ಕೂಡ ಇದಕ್ಕೆ ಸೈ ಎಂದಿದ್ದಾರೆ. ಆದ್ದರಿಂದ ಈಗ ಪ್ರತಿ ಶನಿವಾರ ಸಂಜೆ ಒಂದೊಂದು ವಿಷಯವನ್ನಿಟ್ಟುಕೊಂಡು ಚರ್ಚೆ ಶುರು ಮಾಡೋಣ. ಇದಕ್ಕೆ ತಮ್ಮಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತದೆ ಅಂದುಕೊಂಡಿದ್ದೇನೆ.

ಇಲ್ಲಿ ಗಮನಸಿಬೇಕಾಗಿರೋ ಅಂಶಗಳು:: * ಇಲ್ಲಿ ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವ ಹಾಗಿಲ್ಲ * ಜಾತಿ-ಧರ್ಮಗಳ ಬಗ್ಗೆ ದೂಷಿಸುವಂತಿಲ್ಲ * ಯಾವುದೇ ಚರ್ಚೆಯಾದರೂ ಆರೋಗ್ಯಕರವಾಗಿರಲಿ * ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಬಂದಾಗ, ಚರ್ಚೆಗಳು ಇತಿ-ಮಿತಿಯನ್ನು ಮೀರದಿರಲಿ
* ಪರಸ್ಪರರ ಗೌರವ ಕಾಪಾಡುವುದು ಸದಸ್ಯರೆಲ್ಲರ ಕರ್ತವ್ಯ: * ಚರ್ಚೆ ಕೊನೆಯಾದ ಕೂಡಲೇ ಭಿನ್ನಾಭಿಪ್ರಾಯಗಳು ಕೂಡ ಆ ಕ್ಷಣಕ್ಕೆ ಮುಗಿದಂತೆ ಎಂದು ಭಾವಿಸಲೇಬೇಕು
* ಗ್ರುಪ್‌ನ ಮಾಡರೇಟರ್ (ಅಡ್ಮಿನ್) ಗೆ ಚರ್ಚೆಯ ದಿಕ್ಕನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಸಂಪೂರ್ಣ ಅಧಿಕಾರ ನೀಡಲಾಗಿರುತ್ತೆ
* ಅಡ್ಮಿನ್ ನಿರ್ಧಾರಕ್ಕೆ ಯಾರು ಕೂಡ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ: * ಪ್ರತಿಯೊಂದು ಚರ್ಚೆಗೂ ಇಬ್ಬರು ಕಾಮನ್ ಮಾಡರೇಟರ್ ಗಳಿರುತ್ತಾರೆ. ಅವರು ಬೇಕೆಂದಾಗ ಅಂದಿನ ಚರ್ಚೆಯ ವಿಷಯವನ್ನು ಆಧರಿಸಿ ಗ್ರುಪ್‌ನಲ್ಲಿರೋ ಮತ್ತೊಬ್ಬ ಸದಸ್ಯರನ್ನು ಮಾಡರೇಟರ್ ಆಗಿ ನೇಮಿಸಿಕೊಳ್ಳಬಹುದು

Rules

ಇಲ್ಲಿ ಗಮನಸಿಬೇಕಾಗಿರೋ ಅಂಶಗಳು:

* ಇಲ್ಲಿ ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವ ಹಾಗಿಲ್ಲ * ಜಾತಿ-ಧರ್ಮಗಳ ಬಗ್ಗೆ ದೂಷಿಸುವಂತಿಲ್ಲ * ಯಾವುದೇ ಚರ್ಚೆಯಾದರೂ ಆರೋಗ್ಯಕರವಾಗಿರಲಿ * ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಬಂದಾಗ, ಚರ್ಚೆಗಳು ಇತಿ-ಮಿತಿಯನ್ನು ಮೀರದಿರಲಿ

* ಪರಸ್ಪರರ ಗೌರವ ಕಾಪಾಡುವುದು ಸದಸ್ಯರೆಲ್ಲರ ಕರ್ತವ್ಯ

* ಚರ್ಚೆ ಕೊನೆಯಾದ ಕೂಡಲೇ ಭಿನ್ನಾಭಿಪ್ರಾಯಗಳು ಕೂಡ ಆ ಕ್ಷಣಕ್ಕೆ ಮುಗಿದಂತೆ ಎಂದು ಭಾವಿಸಲೇಬೇಕು
* ಗ್ರುಪ್‌ನ ಮಾಡರೇಟರ್ (ಅಡ್ಮಿನ್) ಗೆ ಚರ್ಚೆಯ ದಿಕ್ಕನ್ನು ಸರಿಯಾಗಿ ತೆಗೆದುಕೊಂಡು ಹೋಗಲು ಸಂಪೂರ್ಣ ಅಧಿಕಾರ ನೀಡಲಾಗಿರುತ್ತೆ

* ಅಡ್ಮಿನ್ ನಿರ್ಧಾರಕ್ಕೆ ಯಾರು ಕೂಡ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ

* ಪ್ರತಿಯೊಂದು ಚರ್ಚೆಗೂ ಇಬ್ಬರು ಕಾಮನ್ ಮಾಡರೇಟರ್ ಗಳಿರುತ್ತಾರೆ. ಅವರು ಬೇಕೆಂದಾಗ ಅಂದಿನ ಚರ್ಚೆಯ ವಿಷಯವನ್ನು ಆಧರಿಸಿ ಗ್ರುಪ್‌ನಲ್ಲಿರೋ ಮತ್ತೊಬ್ಬ ಸದಸ್ಯರನ್ನು ಮಾಡರೇಟರ್ ಆಗಿ ನೇಮಿಸಿಕೊಳ್ಳಬಹುದು

Last 30 Records

Day Members Gain % Gain
March 12, 2024 336 +2 +0.6%
January 22, 2024 334 +1 +0.4%
December 08, 2023 333 +1 +0.4%
November 01, 2023 332 +1 +0.4%
October 01, 2023 331 +1 +0.4%
September 02, 2023 330 -1 -0.4%
August 04, 2023 331 0 0.0%
July 03, 2023 331 +2 +0.7%
April 08, 2023 329 0 0.0%
March 13, 2023 329 +1 +0.4%
January 30, 2023 328 +1 +0.4%
December 23, 2022 327 +2 +0.7%
October 15, 2022 325 +1 +0.4%
September 29, 2022 324 +1 +0.4%
September 10, 2022 323 +1 +0.4%
August 25, 2022 322 +1 +0.4%
August 19, 2022 321 +1 +0.4%
June 28, 2022 320 -1 -0.4%
June 01, 2022 321 +1 +0.4%
May 26, 2022 320 -1 -0.4%
April 29, 2022 321 +1 +0.4%
April 08, 2022 320 +1 +0.4%
April 01, 2022 319 +1 +0.4%
March 09, 2022 318 +45 +16.5%
November 18, 2021 273 +7 +2.7%
November 14, 2021 266 +1 +0.4%
November 09, 2021 265 +10 +4.0%
November 04, 2021 255 +8 +3.3%
October 31, 2021 247 +1 +0.5%

Charts

Some Club Members

More Clubs