ತುಳುನಾಡು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿರುವ ಪ್ರದೇಶವಾಗಿದೆ. ಇಲ್ಲಿಯ ಜನರು ವ್ಯಾವಹಾರಿಕವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ ಈ ಕಾರಣದಿಂದ ಈ ಪ್ರದೇಶ ತುಳುನಾಡು ಎಂದು ಗುರುತಿಸಿಕೊಂಡಿದೆ. ತುಳುನಾಡಿನ ವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹರಿಯುವ ಚಂದ್ರಗಿರಿ ನದಿಯವರೆಗಿನ ವಿಸ್ತಾರವಾಗಿದೆ. ಪುರಾಣಗಳ ಪ್ರಕಾರ “ಪರಶುರಾಮ ತನ್ನ ತಾಯಿಯನ್ನು ಕೊಂದ ಪಶ್ಚಾತ್ತಾಪಕ್ಕಾಗಿ ಕೊಲ್ಲಲು ಬಳಸಿದ ಕೊಡಲಿಯನ್ನು ದೂರ ಎಸೆದಾಗ ಸಮುದ್ರ ಭಾಗ ಸರಿದು ಒಂದು ಭೂಭಾಗ ಸೃಷ್ಟಿಯಾಗುತ್ತದೆ, ಹಾಗೆ ಸೃಷ್ಟಿಯಾದ ಪ್ರದೇಶವೇ ನಮ್ಮ ತುಳುನಾಡು. ಈ ಕಾರಣದಿಂದ ತುಳುನಾಡನ್ನು ಪರಶುರಾಮ ಸೃಷ್ಟಿ ಎಂದೂ ಕರೆಯಲಾಗುತ್ತದೆ.
ತುಳುನಾಡಿಗೆ ತನ್ನದೆಯಾದ ಸಂಸ್ಕೃತಿ, ಆಚರಣೆ, ವ್ಯವಹಾರ, ತನ್ನದೆಯಾದ ಭಾಷೆ, ಪ್ರಮುಖವಾದ ಆಚರಣೆ ಭೂತಾರಾಧನೆಯನ್ನು ಆರಾಧಿಸಿಕೊಂಡು ಬದುಕುವ ಜನರ ಜೀವನ ಶೈಲಿ. ಇಂತಹ ಸಾಂಸ್ಕೃತಿಕ ನೆಲೆಕಟ್ಟನ್ನು ಹೊಂದಿರುವ ನಮ್ಮ ತುಳುನಾಡು ಇಂದು ಜಗತ್ತಿನಲ್ಲೇ ವಿಶೇಷವಾದ ಸ್ಥಾನವನ್ನು ಹೊಂದಿದೆ. ತುಳುನಾಡಿನ ಆಚರಣೆಯಲ್ಲಿ ಮುಖ್ಯವಾಗಿ ಭೂತಾರಾಧನೆ. ಇಲ್ಲಿಯ ಜನರು ಭೂತಾರಾಧನೆ(ದೈವ) ಮತ್ತು ದೇವರು ಬೇರೆಬೇರೆ ಎಂದು ನೋಡುವುದಿಲ್ಲ. ದೈವ ಮತ್ತು ದೇವರು ಎರಡನ್ನು ಭಿನ್ನ ನೆಲೆಯಲ್ಲಿ ನಂಬಿ ಆರಾಧಿಸಿಕೊಂಡು ಬದುಕುತ್ತಿದ್ದಾರೆ. ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತುಳು ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ. ಇಂದು ತುಳುನಾಡಿನ ಸಾಂಸ್ಕೃತಿ ನಾಶವಾಗಿ ಹೋಗದೆ ಇರುವುದಕ್ಕೆ ಮೂಲ ಕಾರಣ ಇಲ್ಲಿಯ ಜನರು ನಂಬಿಕೊಂಡು ಬಂದಿರುವ ಭೂತಾರಾಧನೆ. ಭೂತ(ದೈವ)ವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ ಎಂಬ ನಂಬಿಕೆಯಿದೆ.
ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು ಭಕ್ತಿ ಶ್ರದ್ದೆಯಿಂದ ಇಂದಿಗೂ ಆಚರಿಸಿಕೊಂಡು ಬಂದಿರುತ್ತಾರೆ. ತುಳುನಾಡಿನ ಜನರಿಗೆ ಭೂತ ಕೋಲ ಸಾಮಾಜಿಕ-ಸಾಂಸ್ಕೃತಿಕ ಜೀವನದ ಅನಿವಾರ್ಯ ಭಾಗವಾಗಿ ಕಾಣುತ್ತದೆ. ತಮ್ಮ ಜೀವನದಲ್ಲಿ ಬರುವ ದುಃಖ, ಕಷ್ಟ ಮತ್ತು ದುಷ್ಟ ಶಕ್ತಿಗಳಿಂದ ಬರುವ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸುವಂತೆ ದೈವಗಳಲ್ಲಿ ಪ್ರಾಥಿಸುತ್ತಾರೆ, ಇದಕ್ಕೆ ಮುಖ್ಯ ಕಾರಣ ದೈವಾರಾಧನೆಯು ಇಲ್ಲಿಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇವೆಲ್ಲ ಇಲ್ಲಿಯ ಜನರ ಭಕ್ತಿ, ಸ್ಫೂರ್ತಿಯಾಗಿದೆ. ಇಂದಿನ ಆದುನಿಕ ಜಗತ್ತಿನ ಜೀವನದಲ್ಲಿ ಜನರು ಎಷ್ಟೇ ಮುಂದುವರಿದರು ತುಳುನಾಡಿನ ಜನರು ಮಾತ್ರ ದೈವಾರಾಧನೆಯನ್ನು ಮೀರಿ ಎಂದು ಹೋಗುದಿಲ್ಲ. ತಮ್ಮ ಹಿರಿಯರು ಆರಾಧಿಸಿಕೊಂಡು ಬಂದಿರುವಂತ ದೈವ ಶಕ್ತಿಯನ್ನು ಇಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುತಿದ್ದರೆ. ಮತ್ತು ದೈವಾರಾಧನೆಯಲ್ಲಿ ದೈವವು ನೀಡಿದ ಅಭಯ ಹಸ್ತವನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಇಲ್ಲವಾದರೆ ತಮಗೆ ಕೆಟ್ಟದಾಗುವುದು ಎನ್ನುವ ಭಯ ಜನರಿಗೆ ಇರುವುದರಿಂದ ದೈವವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ಎಲ್ಲ ವಿಷಯಗಳಿಂದ ತುಳುನಾಡಿನಲ್ಲಿ ಭೂತಾರಾಧನೆಯು ತುಂಬಾ ಮಹತ್ವವಾಗಿದೆ.
Day | Members | Gain | % Gain |
---|---|---|---|
June 26, 2024 | 93 | -1 | -1.1% |
March 20, 2024 | 94 | +1 | +1.1% |
January 30, 2024 | 93 | +1 | +1.1% |
December 16, 2023 | 92 | +1 | +1.1% |
November 06, 2023 | 91 | +1 | +1.2% |
October 07, 2023 | 90 | +1 | +1.2% |
September 07, 2023 | 89 | +1 | +1.2% |
August 09, 2023 | 88 | 0 | 0.0% |