ನಮಸ್ತೆ ಸ್ವಾಭಿಮಾನಿ ಕನ್ನಡಿಗರೇ...🙏
ಕರುನಾಡು ಅಂದರೆ ಕನ್ನಡ ನಾಡು, ಕರ್ನಾಟಕ, ಕರು( ಶ್ರೇಷ್ಠ) ನಾಡು, ಕಮ್ಮಿತ್ತು( ಘಮದ, ಕಂಪಿನ, ಕೆಮ್ಮಣ್ಣಿನ) ನಾಡು , ಕನ್ನಡಿಗರ ನಾಡು ಎಂಬ ಹಲವಾರು ಅರ್ಥ ಇದೆ........ಒಡಲು ಅಂದರೆ ಶರೀರ, ಹೊಟ್ಟೆ, ಅಂತರಂಗ, ಹೃದಯ, ಒಳಭಾಗ ಅಂತ ಅರ್ಥ. ಕರುನಾಡ ಒಡಲು ಅಂದರೆ ಕರ್ನಾಟಕ ಪ್ರದೇಶದಲ್ಲಿ ಇರುವ ಸಾಹಿತ್ಯ ಸಂಗೀತ ಸಂಸ್ಕೃತಿಯ, ಪ್ರಾದೇಶಿಕ ವೈಶಿಷ್ಟ್ಯಗಳನ್ನು ಹೊಂದಿರುವ ನಾಡು ಎಂದು ಅರ್ಥ.
ಧನ್ಯವಾದಗಳು...🙏
ವಿ. ಸೂ: ಇಲ್ಲಿ "ಕರುನಾಡ ಒಡಲು" ಎಂಬ ಈ ಕೊಠಡಿಯ ಬೆಳವಣಿಗೆಯ ಅಗತ್ಯವಿಲ್ಲ. ಇಲ್ಲಿ ಉತ್ತಮ ವಿಚಾರಗಳನ್ನು ಹಂಚಿಕೊಳ್ಳಲು ಹಾಗೂ ತಿಳಿದುಕೋಳ್ಳಲು ಮಾಡಿರುವ ಕೊಠಡಿಯೇ ಹೊರತು ಇಲ್ಲಿ ಯಾರ ವೈಯ್ಯಕ್ತಿಕ ಬೆಳವಣಿಗೆಗಾಗಿ ನಡೆಸುತ್ತಿಲ್ಲ. ಈ ಕೊಠಡಿಗೆ ಆಗಮಿಸಿ ತಮ್ಮ ವಿಚಾರಗಳನ್ನು ತಿಳಿಸುವವರಿಗೂ ಹಾಗೂ ತಿಳಿದುಕೋಳ್ಳಲು ಬರುವವರಿಗೂ ತುಂಬು ಹೃದಯದ ಸ್ವಾಗತ ಹಾಗೂ ಧನ್ಯವಾದಗಳು 💐❤️🙏
1) ಸರ್ವೇ ಜನಾ ಸುಖಿನೋ ಭವಂತು: ಇಲ್ಲಿ ಎಲ್ಲರೂ ಒಂದೇ ಹಾಗೂ ಸಮಾನರು ಎಲ್ಲರೂ ಭಾರತೀಯರು/ಕನ್ನಡಿಗರು ಒಬ್ಬರನ್ನೊಬರು ಗೌರವದಿಂದ ಕಾಣಬೇಕು. ಇಲ್ಲಿ ಯಾವುದೇ ಜಾತಿ, ಧರ್ಮ, ವೈಯ್ಯುಕ್ತಿಕ ವಿಚಾರಗಳು ಹಾಗೂ ದ್ವೇಷ ನಿಷೇಧಿಸಲಾಗಿದೆ.
2) ಮಾನವೀಯತೆಯೇ ಮನುಕುಲದ ಧರ್ಮ: ಇಲ್ಲಿ ನಡೆಯುವ ಚರ್ಚೆ ಆರೋಗ್ಯಕರ ಹಾಗೂ ಪ್ರೀತಿಯಿಂದ ಇರಬೇಕು, ವೈಯ್ಯಕ್ತಿಕವಾಗಿ ತೆಗೆದುಕೊಳ್ಳಬಾರದು. ಇಲ್ಲಿ ಸಮಸ್ಯಗಳ ಪರಿಹಾರಗಳ ಚರ್ಚೆ ಆಗಬೇಕು. ಒಬ್ಬರು ಮಾತನಾಡುವಾಗ ಮಧ್ಯೆ ಮಾತನಾಡಬಾರದು, ಸರದಿ ಬರುವವರೆಗೂ ತಾಳ್ಮೆಯಿಂದ ಕಾಯಬೇಕು.
3) ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು: ಒಬ್ಬರಿಗೆ ಒಮ್ಮೆ ಮಾತ್ರ ಮಾತನಾಡಲು ಅವಕಾಶ ನೀಡಲಾಗುವುದು, ಸಮಯವಿದ್ದರೆ ಮತ್ತೊಮ್ಮೆ ಮಾತನಾಡಲು ಅವಕಾಶ ನೀಡಲಾಗುವುದು. ಇಲ್ಲಿ ಯಾವುದೇ ಅವಾಚ್ಯ ಶಬ್ದ ಬಳಸುವಾಗಿಲ್ಲ, ಅಹಿತಕರವಾಗಿ ಅಥವಾ ನಿಯಮಗಳ ಉಲ್ಲಂಘಿಸಿದರೆ ಕೊಠಡಿಯಿಂದ ಹೊರ ಹಾಕಲಾಗುವುದು.
Day | Members | Gain | % Gain |
---|---|---|---|
June 17, 2024 | 578 | +2 | +0.4% |
March 16, 2024 | 576 | +5 | +0.9% |
January 25, 2024 | 571 | +1 | +0.2% |
December 12, 2023 | 570 | +3 | +0.6% |
November 03, 2023 | 567 | +4 | +0.8% |
October 03, 2023 | 563 | +12 | +2.2% |
September 04, 2023 | 551 | +31 | +6.0% |
August 06, 2023 | 520 | -1 | -0.2% |