ನೋಬಲ್ ಇಂಟರ್ ನ್ಯಾಷನಲ್ ಶಾಲೆಯ ಒಂದು ಉಪಯುಕ್ತ ಪ್ರಯತ್ನ 'NIS - ಗ್ರಂಥ ಮಂಥನ'.
ಪ್ರತಿ ನಿತ್ಯ ಅಧ್ಯಯನ ಮಾಡಬೇಕು ಎಂಬುದು ಪ್ರತಿಯೊಬ್ಬರ ಹಂಬಲ. ನಿತ್ಯ ಓದುವುದರಿಂದ ನಮ್ಮ ಜೀವನದಲ್ಲಿ ಯಶಸ್ಸು ಹಾಗೂ ಸಂತೋಷ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸಲು ಹಾಗೂ ಅವರ ಏಳ್ಗೆಗೆ ಮಾರ್ಗದರ್ಶನ ಮಾಡಲು ನಿರಂತರ ಕಲಿಕೆ ಅನಿವಾರ್ಯ.
ಆದರೆ, ನಿತ್ಯದ ಜೀವನದ ಜಂಜಾಟದಲ್ಲಿ ಓದುವ ಅಭ್ಯಾಸ ರೂಡಿ ಮಾಡಿಕೊಳ್ಳುವುದು ಕಷ್ಟದ ಕೆಲಸ. ಈ ಸಮಸ್ಯೆಯ ಸಮಾಧಾನವೇ 'NIS - ಗ್ರಂಥ ಮಂಥನ'.
ಗ್ರಂಥ ಮಂಥನದಲ್ಲಿ ಮಾಡುವುದೇನು??
• ಪ್ರತಿದಿನ ಸಂಜೆ 8:೦೦ ಘಂಟೆಯಿಂದ 8:30 ರ ವರೆಗೂ ಆಯ್ದ ಗ್ರಂಥದ ಅಧ್ಯಯನ ಮಾಡುವುದು
• ಉತ್ತಮ ಗ್ರಂಥಗಳನ್ನು ಮೊದಲು ಓದುವುದು, ನಂತರದಲ್ಲಿ ಅದರ ಸೂಕ್ತ ವ್ಯಾಖ್ಯಾನ ಮಾಡುವುದು
• ಅದರಲ್ಲಿನ ಅಂಶಗಳನ್ನು ನಮ್ಮ ಬದುಕಿಗೆ ತಾಳೆ ಹಾಕಿ ಯಶಸ್ಸಿಗೆ ಬೇಕಾದ ಮಾರ್ಗದರ್ಶನವನ್ನು ಪಡೆಯುವುದು
• ಓದಿದ ವಿಚಾರಗಳನ್ನು ಮಕ್ಕಳಿಗೆ ಉಪಯೋಗವಾಗುವ ರೀತಿಯಲ್ಲಿ ಅರ್ಥೈಸಿಕೊಳ್ಳುವುದು
ನಮ್ಮ ನಿತ್ಯದ ಓದು ನಮ್ಮ ಬದುಕಿಗೂ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕೂ ಅತ್ಯುತ್ತಮ ಪರಿಣಾಮಗಳನ್ನು ನೀಡುತ್ತದೆ.
ಬನ್ನಿ, ಗ್ರಂಥ ಮಂಥನದಿಂದ ಜ್ಞಾನದ ಭಂಡಾರವನ್ನು ಜಾಗೃತಗೊಳಿಸಿ ಉತ್ತಮ ಜೀವನದೆಡೆಗಿನ ನಡಿಗೆಯಲ್ಲಿ ಒಟ್ಟಿಗೆ ಸಾಗೋಣ.
Day | Members | Gain | % Gain |
---|---|---|---|
April 29, 2024 | 104 | 0 | 0.0% |
February 15, 2024 | 104 | +1 | +1.0% |
December 31, 2023 | 103 | +1 | +1.0% |
November 17, 2023 | 102 | 0 | 0.0% |
October 17, 2023 | 102 | 0 | 0.0% |
September 17, 2023 | 102 | +1 | +1.0% |
August 19, 2023 | 101 | 0 | 0.0% |