ಸನಾತನ ಧಾರ್ಮಿಕ, ವೈದಿಕ ಮತ್ತು ಅಧ್ಯಾತ್ಮಿಕ ಸಾಹಿತ್ಯದ ಪಠಣ,ಮನನ ಹಾಗೂ ಭಾವಚಿಂತನ.
****
ಧಾರ್ಮಿಕ, ವೈದಿಕ ಮತ್ತು ಆಧ್ಯಾತ್ಮಿಕ ಸಾಹಿತ್ಯ ಗ್ರಂಥ ಸಂಪತ್ತು ನಮಗೆ ಇಂದು ಅಪಾರ ಪ್ರಮಾಣದಲ್ಲಿ ಲಭ್ಯವಿದೆ. ಇದರ ವ್ಯಾಪ್ತಿ ತುಂಬಾ ವಿಸ್ತಾರ, ಪ್ರಮಾಣ ವಿಪುಲ ಹಾಗೂ ಅಪರಿಮಿತ. ಈ ಎಲ್ಲಾ ಙ್ಞಾನ ರಾಶಿಯನ್ನು ಸಾಮಾನ್ಯ ಜಿಜ್ಞಾಸುಗಳು ಸಂಪೂರ್ಣವಾಗಿ ಅಧ್ಯಯನ ಮಾಡುವುದು ಹಾಗಿರಲಿ, ಸುಮ್ಮನೆ ಓದಿಕೊಂಡು ಹೋಗುವುದು ಸಹ ಒಂದು ದುಸ್ತರವಾದ ಕಾರ್ಯವೇ ಆಗಿದೆ.
***
ಈ ಹಿನ್ನೆಲೆಯಲ್ಲಿ, ಈ ವೇದಿಕೆಯ ಒಂದು ಕಿಂಚಿತ್ ಪ್ರಯತ್ನ ವೆಂದರೆ, ಈ ಅಮೋಘ ಜ್ಞಾನ ಸಾಗರದಿಂದ ಕೆಲವೊಂದು ಬಿಂದುಗಳನ್ನಾದರೂ ಸಂಗ್ರಹಿಸಿ ಸಹೃದಯರಿಗೆ ಪ್ರಾಶನ ಮಾಡಿಸುವುದು. ಅಂತಹ ಸಾಹಿತ್ಯದ ಶ್ಲೋಕಗಳ ಪಠಣ ವನ್ನು ಮಾಡಿ, ಆಕರ ಗ್ರಂಥಾಧಾರಿತ ತಾತ್ಪರ್ಯವನ್ನು ಪ್ರಸ್ತುತಪಡಿಸುವುದು ಈ ವೇದಿಕೆಯ ಯೋಜನೆ. ಇದು ಶ್ಲೋಕಗಳನ್ನು ಮತ್ತು ಭಾವಾರ್ಥ ವನ್ನು ಯಥಾರೂಪ ವಾಗಿ ಸಾದರಪಡಿಸುವ ಕಾರ್ಯಕ್ರಮವೇ ಹೊರತು, ಗಹನಭಾಷ್ಯವನ್ನಾಗಾಲೀ, ಗಂಭೀರ ವಿಮರ್ಷೆಯನ್ನಾಗಲೀ ಮಾಡುವ ಗುರಿಯನ್ನು ಹೊಂದಿಲ್ಲ.
****
ಇನ್ನು ಈ ಕಾರ್ಯಕ್ರಮದ ನಿರೂಪಣಾ ಕ್ರಮದ ಬಗ್ಗೆ ಒಂದೆರಡು ಮಾಹಿತಿಗಳು:
ಮೊದಲು, ಆರಿಸಿಕೊಂಡ ಸಾಹಿತ್ಯದ ಶ್ಲೋಕಗಳನ್ನು ಒಬ್ಬರು ಪಠಿಸುತ್ತಾರೆ. ನಂತರ ಇನ್ನೊಬ್ಬರು ಆ ಶ್ಲೋಕದ ಕಿರು ತಾತ್ಪರ್ಯವನ್ನು ಪ್ರಸ್ತುತ ಪಡಿಸುತ್ತಾರೆ. ಕೊನೆಯಲ್ಲಿ, ಶ್ರೋತೃಗಳ ವಿಭಾಗದಲ್ಲಿರುವ ಕೇಳುಗರಿಗೆ, ವೇದಿಕೆಗೆ ಬರುವುದಕ್ಕಾಗಿ Hand Rise Option ಕಲ್ಪಿಸಿ ಕೊಡಲಾಗುತ್ತದೆ. ಅದನ್ನು ಬಳಸಿಕೊಂಡು, ವೇದಿಕೆಯ ಮೇಲೆ ಬಂದು ತಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಹಾಗೂ ಸಂಗೀತ, ಭಜನೆ, ಶ್ಲೋಕ ಇತ್ಯಾದಿ ಇದ್ದಲ್ಲಿ ಪ್ರಸ್ತುತ ಪಡಿಸುವ ಅವಕಾಶವಿದೆ.
***
ಸ್ಕಂದ ಪುರಾಣದ ಕಾಶೀಖಂಡದ ಶ್ಲೋಕಗಳ ಪಠಣ ಮತ್ತು ತಾತ್ಪರ್ಯ ಚಿಂತನ:
ಈ ಕಾರ್ಯಕ್ರಮ ವಾರಕ್ಕೊಮ್ಮೆ, ಪ್ರತೀ ಭಾನುವಾರ ಸಾಯಂಕಾಲ 8.00 ಗಂಟೆಯಿಂದ ಸುಮಾರು 60ರಿಂದ 90 ನಿಮಿಷ ಗಳ ಅವಧಿಗೆ ಮಾತ್ರ ಸೀಮಿತ ವಾಗಿರುತ್ತದೆ. ತಾವೆಲ್ಲರೂ ಪ್ರತೀ ಭಾನುವಾರ ತಪ್ಪದೇ ಭಾಗವಹಿಸಬೇಕಾಗಿ ಅಪೇಕ್ಷಿಸುತ್ತೇವೆ.
ಪ್ರತಿ ಬುಧವಾರ ಸಂಜೆ ೭ರಿಂದ ೮.೩೦ರವರೆಗೆ ಎಲ್ಲರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು *'ಭಕ್ತಿಯೋಗ' ಅನ್ನುವ ವಿಭಿನ್ನವಾದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಕ್ತಿ ಸಂಗೀತ ವಿಭಾಗದಲ್ಲಿ ದಾಸರ ಪದಗಳು, ತತ್ತ್ವ ಪದಗಳು, ವಚನಗಳು, ಸ್ತೋತ್ರ ಪಠಣ, ಉಗಾಭೋಗಗಳು ಮುಂತಾದುವುಗಳ ಹಾಡುವಿಕೆಗೆ ಅವಕಾಶವಿದೆ.
ಇನ್ನು 'ಸುಜ್ಞಾನ ದೀಪಿಕಾ' ಅನ್ನುವ ವಿಭಾಗದಲ್ಲಿ ಭಕ್ತಿಪಂಥ, ದೈವಶ್ರದ್ಧೆ, ಆತ್ಮೋನ್ನತಿ, ವ್ಯಕ್ತಿ ವಿಕಸನ ಮುಂತಾದ ವಿಚಾರಗಳ ಬಗ್ಗೆ ನಾಡಿನ ಹಿರಿಯ ವಿದ್ವಾಂಸರಿಂದ ಮೂವತ್ತು ನಿಮಿಷಗಳ ಪ್ರವಚನಗಳೂ ಸೇರಿವೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಂದು ದೈವದತ್ತ ಪ್ರತಿಭೆಯಿದೆ. ಇಂತಹ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ವೇದಿಕೆ.
******
ಪ್ರತಿ ಸೋಮವಾರ ಮತ್ತು ಮಂಗಳವಾರ ಹಾಗೂ ಗುರುವಾರ ಮತ್ತು ಶುಕ್ರವಾರ ಗಳಂದು ಭಗವದ್ಗೀತೆಯ ಶ್ಲೋಕಗಳ ಪಠಣ ಪದಚ್ಛೇದ, ಅನ್ವಯ ಮತ್ತು ಭಾವಾರ್ಥ ಚಿಂತನ.
ಬನ್ನಿ,ಈ ಎಲ್ಲ ಕಾರ್ಯಕ್ರಮಗಳಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿರುತ್ತೇವೆ. ಧನ್ಯವಾದಗಳು 🙏
Day | Members | Gain | % Gain |
---|---|---|---|
July 16, 2024 | 928 | +22 | +2.5% |
April 19, 2024 | 906 | +118 | +15.0% |
February 10, 2024 | 788 | +13 | +1.7% |
December 27, 2023 | 775 | +20 | +2.7% |
November 13, 2023 | 755 | +33 | +4.6% |
October 13, 2023 | 722 | +149 | +26.1% |
September 14, 2023 | 573 | +57 | +11.1% |