Life is a shameless game
Love is a aimless journey
Our life is a game played by others.!! 🤙
ಪರಿಚಯ ನಾನಾಗೇ ಮಾಡಿಕೊಳ್ಳೋದು ಎಷ್ಟು ಸರಿ..? ಆದರೂ ಇರಲಿ ಮಾಡಿಕೊಂಡಲ್ಲಿ ತಪ್ಪೇನಿಲ್ಲ.
ಇರಲಿ, ನನ್ನ ಹೆಸರು ವಿನಯ್ ಪೋತದಾರ್, ನಾನು ಹುಟ್ಟಿದ್ದು 27 ನವೆಂಬರ್ 1989, ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಎಂಬ ನನ್ನೂರು.
ಚಿಕ್ಕಂದಿನಿಂದಲೇ ನನಗೆ ಸಿನಿಮಾದ ಮೇಲೆ ಆಸಕ್ತಿ, ನಟನಾಗಬೇಕು ಎಂಬ ಆಸೆ.. ಹಾಗೆಯೇ ಸಿನಿಮಾದವರ ನಂಟು ಬೆಳೆಯಿತು.. ಮುಂದೆ ನಡೆದಿದ್ದೆಲ್ಲ ಇತಿಹಾಸದ ಪುಸ್ತಕ ಬರೆದಾಗ ಅದರ ಬಗ್ಗೆ ತಿಳಿಸುತ್ತೇನೆ.
ಸದ್ಯಕ್ಕೆ ಒಂದು ಮರಾಠಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ. ಸರಸ್ವತಿ ಆಶೀರ್ವಾದ ಇದೆ. ಆದರೆ ಯಾಕೋ ಲಕ್ಷ್ಮಿ ಕೋಪ ಮಾಡಿಕೊಂಡಿದ್ದಾಳೆ.. ಹಾಗಾಗಿ ಒಂದು ಹಿಂದಿ ನ್ಯೂಸ್ ಚಾನೆಲ್ ನಲ್ಲಿ ರೈಟರ್ ಆಗಿ ಜೀವನ ಸಾಗಿಸುತ್ತಿದ್ದೇನೆ..ಮುಂದೆ ನೋಡೋಣ ಏನಾಗುತ್ತೆ ಅಂತ..!!!
ಹುಟ್ಟು ಬಡವ ನಾನು, ಬಟ್ಟೆ ಅಮ್ಮ ಕೊಡಿಸಿದ್ದು, ಆಸ್ತಿ ಅಪ್ಪನದು. ಬದುಕು ಕಲಿಸಿದ ಪಾಠವೇ ನನ್ನ ಬಂಡವಾಳ. ಖಾಲಿ ಹಾಳೆಯೆಂಬ ಸಣ್ಣ ಸೈಟಿದೆ, ಪೆನ್ನು ಹಿಡಿದು ಕೃಷಿ ಮಾಡುತ್ತೇನೆ. ನಿರಂತರ ಓದು, ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಟ, ಇದೆಲ್ಲದರ ನಡುವೆ ನೀವೆಲ್ಲ ಬೊಗಸೆ ತುಂಬ ಮೊಗೆ ಮೊಗೆದು ನೀಡಿದ ಬೆಲೆಕಟ್ಟಲಾಗದ ಪ್ರೀತಿ.. ಧನ್ಯೋಸ್ಮಿ..
ಊರು ಬಿಟ್ಟು ಬಹಳ ವರ್ಷವಾಯ್ತು.. ಸಧ್ಯ ಸಿನಿಮಾವನ್ನು ನಂಬಿ ಬೆಂಗಳೂರು, ಮುಂಬಯಿಯಲ್ಲಿದ್ದೀನಿ. ಇದೇ ಅನ್ನ ನೀಡ್ತಾ ಇದೆ, ಆಶ್ರಯಕ್ಕೊಂದು ಮನೆ, ಆದರೆ ಬದುಕು ಕಲಿಸಿದ ಪಾಠದೆದುರು ನಾ ಕಲಿತಾ ಇರೋದು ಕಡಿಮೆಯೇ.
ಇದನ್ನೆಲ್ಲ ಹೇಳೊಕೆ ನಾನೇನು ಅನುಭವದ ಬುತ್ತಿ ಸಾಕಷ್ಟು ಇರುವ ಮಾಲೀಕನಲ್ಲ, ಬದುಕಿನ ಪಯಣವನ್ನು ಕೆಲವೇ ದಿನಗಳ ಮೊದಲು ಆರಂಭಿಸಿದ ಪ್ರಯಾಣಿಕ. ಇದಕ್ಕಿಂತ ಹೆಚ್ಚಾಗಿ ಹೇಳಿಕೊಳ್ಳೊಂಥದ್ದು ಏನೂ ಇಲ್ಲ, ಉಳಿದದ್ದು ಅಪ್ರಸ್ತುತ.
ನಾನು ನನ್ನ ಅನ್ನಪ್ರಾಶನದಲ್ಲಿ ಪೆನ್ನನ್ನು ಹಿಡಿದಿದ್ದೆ ಅಂತ ಮನೆ ಹಿರಿಯರು ಹೇಳುತ್ತಾ ಇರೋದು ನೆನಪಿದೆ. ಅದೇ ಕಾರಣವೊ ಅಥವಾ ಬದುಕು ನಡೆಸಿದ ದಿಕ್ಕು ಹಾಗೆ ಇತ್ತೋ ಗೊತ್ತಿಲ್ಲ, ಬರವಣಿಗೆ ಒಂದು ಹುಚ್ಚಾಗಿ, ಈಗಂತೂ ಅದೇ ಹೆಚ್ಚಾಗಿ ಅಂಟಿಕೊಂಡುಬಿಟ್ಟಿದೆ. ಹಾಗಂತ ನಾನು ಅಷ್ಟು ಸುಂದರವಾಗಿ ಬರೆಯುತ್ತೇನೆ ಎಂದಲ್ಲ, ಅದನ್ನು ನಿರ್ಧರಿಸಬೇಕಾದವರು ಅದನ್ನು ಓದುವ ಗಳೆಯ ಗೆಳತಿಯರು..
ನನ್ನದೇನಿದ್ದರೂ ನಾಲ್ಕು ಸಾಲು ಗೀಚಿ ಎದೆಭಾರ ಇಳಿಸಿಕೊಳ್ಳುವುದಷ್ಟೇ ಕೆಲಸ. ಇಷ್ಟು ದಿನ ಅದು ನನ್ನ ಡೈರಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಯಾಕೊ ಅದು ಎಲ್ಲೆ ಮೀರಿದೆ.. ಅದಕ್ಕಾಗಿಯೇ ನಿಮ್ಮೆದುರು ನಾನು ಏನು ಬರೆಯುತ್ತೇನೋ ಅಥವಾ ಈ ಹಿಂದೆ ಏನು ಬರೆದಿದ್ದೆನೊ ಅದನ್ನು ತೆರೆದಿಡುತ್ತಾ ಇದ್ದೇನೆ.. ಹಾಗೆ ತೆರೆದಿಡುವ ಸಣ್ಣ ಪ್ರಯತ್ನ ಸಹ ಮಾಡುವೆ..
ಧನ್ಯವಾದಗಳು
Invited by: Pavan Prabhakar
if the data has not been changed, no new rows will appear.
Day | Followers | Gain | % Gain |
---|---|---|---|
January 09, 2024 | 371 | +15 | +4.3% |
November 28, 2022 | 356 | +2 | +0.6% |
September 19, 2022 | 354 | +3 | +0.9% |
August 03, 2022 | 351 | +2 | +0.6% |
June 27, 2022 | 349 | -5 | -1.5% |
May 21, 2022 | 354 | +4 | +1.2% |
April 12, 2022 | 350 | +26 | +8.1% |
January 07, 2022 | 324 | +8 | +2.6% |
November 30, 2021 | 316 | +7 | +2.3% |
October 22, 2021 | 309 | +13 | +4.4% |