latha surabhi on Clubhouse

Updated: Aug 7, 2023
latha surabhi Clubhouse
344 Followers
255 Following
@surabhilatha Username

Bio

ಹೆಸರು: ಸುರಭಿ ಲತಾ
ತಂದೆ: ಕೃಷ್ಣ ರಾವ್
ತಾಯಿ: ಸುಶೀಲಮ್ಮ
ವಿದ್ಯಾರ್ಹತೆ:ಎಸ್ ಎಸ್ ಎಲ್ ಸಿ.
ಪರ್ಸನಲ್ ಸೆಕ್ರೆಟರಿ ಕೋರ್ಸ್ ಎರಡು ವರ್ಷ.
ಹವ್ಯಾಸ: ಚಿತ್ರ ಕಲೆ,ಸಾಹಿತ್ಯ
ಮುಖ ಪುಸ್ತಕ ದಲ್ಲಿ ಹಲವು ವರ್ಷ ಗಳಿಂದ ಕವಿತೆ,ಕವನ.ಕಥೆ,ಗಝಲ್, ದಾರವಾಹಿ.ಪ್ರಬಂಧಗಳು, ಹಾಗು ಸಾಮಾಜಿಕ ಬರಹಗಳು ಬರೆಯುತ್ತ ಬಂದಿರುವೆ.

ಏನು ಬರೆದರೇನು
ಎದೆಯ ನೋವು ಇಂಗದೆ
ಏನು ಬರೆದರೇನು
ಎದೆಯ ಕಾವು ಆರದೆ

ಒಳಿತು ಕಾಲವದು ಬರದೆ
ಕೊರಗಿದೆ ಕನವರಿಕೆಯಲಿ
ಭರವಸೆಗಳವು ಕಾಣದೆ
ಮೂಡಿ ಬಂತು ಕವಿತೆಯಲಿ

ಸುಟ್ಟು ಹೋದ ನೂಲ
ಮತ್ತೆ ಹೆಣೆಯ ಲಾಗದು
ಸತ್ತು ಹೋದ ಕಾಲ
ಮತ್ತೆಂದು ಬರಲಾರದು

ನೊಂದ ಬದುಕಿದು
ಬದಲುವಂತೆ ಕಾಣದು
ನಡೆವ ದಾರಿಯಿದು
ಸುಮ್ಮನಂತೂ ಕೂರದು

ಎಷ್ಟು ಬರೆದರೇನು
ಮುಗಿಯದು ಈ ಪದಗಳು
ಇಷ್ಟ ವಾದರೆ ತಾನೆ ಏನು
ಕಷ್ಟವು ಬದುಕಿನ ದಿನಗಳು



ನನ್ನ ಹಲವು ಬರಹಗಳು ಹಾಯ್ ಬೆಂಗಳೂರು ಪತ್ರಕೆ.ಹಾಗು ಓ ಮನಸೆ ತಿಂಗಳ ಪುಸ್ತಕ ದಲ್ಲಿ ಪ್ರಕಟ ಗೊಂಡಿದೆ.ಅದಲ್ಲದೆ ಹಲವು ದಿನ ಪತ್ರಿಕೆಗಳಲ್ಲಿ ನನ್ನ ಕವನಗಳು ಪ್ರಕಟಗೊಂಡಿದೆ.( ಪ್ರಜಾವಾಣಿ, ಮತ್ತ ಆಯಾ ಊರಿನ ಪತ್ರಿಕೆಗಳಲ್ಲಿ)

ಸಾವಿರಾರು ಜನಗಳ ಅಭಿಮಾನ ದಿಂದ ಹಲವು ಬಿರುದುಗಳು ಸಂದಿವೆ .

ಮುಖ ಪುಸ್ತಕ ದ ಮುತ್ತು ಎಂದು ಒಂದು ದಿನಪತ್ರಿಕೆ ಯಲ್ಲಿ ನನ್ನ ಕವನದ ಜೊತೆ ನನ್ನ ಪರಿಚಯದ ಮಾಲಿಕೆ ಬಂದಿದೆ.

ಕಲಿಯುಗದ ರಾಧ
ಕೃಷ್ಣ ಸಖಿ ಹೀಗೆ ಹಲವಾರು ಹೆಸರುಗಳು ಬಂದಿವೆ
ನಮ್ಮೊಳಗಿನ ನಾನು ಎಂಬ ನಾಟಕ ರಂಗದಿಂದ ಸನ್ಮಾನ

ಹಾಗು ವಿಶ್ವ ಪ್ರಿಯ ಸುಮಧುರ ಸ್ವರಗಳು ಎಂಬ ಗಾನ ಸುರುಳಿಯ ಕಡೆಯವರಿಂದ ಸನ್ಮಾನ
ನೆನಪಿನ ಕಾಣಿಕೆಗಳು ಲಭಿಸಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

ಕನ್ನಡ ನುಡಿ ಹಬ್ಬದ ನೆನಪಿನ ಕಾಣಿಕೆ

ನನ್ನವರ ಗಾಯನದ ಲೋಟರಿ ಕ್ಲಬ್ ಅವರಿಂದ ದೊಡ್ಡ ಸನ್ಮಾನ ಹಾಗು ಕವಿತೆಯ ದ್ವನಿ ಮುದ್ರಣ ಗೊಂಡಿದೆ.

ಅಖಿಲ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಯಿಂದ ಸನ್ಮಾನ.

ನಾವಿಕೋತ್ಸವ 2016 ( ಹೊರ ದೇಶದ ಕನ್ನಡಿಗರ ಸಂಘ) ದಿಂದ ಸನ್ಮಾನ ಹಾಗು International book ನಲ್ಲಿ ನನ್ನ ಕಥೆ,ಹಾಗು ಕವಿತೆ ಪ್ರಕಟ ಗೊಂಡು ಹೊರದೇಶದ ಕನ್ನಡಿಗರ ಕೈ ಸೇರಿದೆ.

ಅಲ್ಲಮಪ್ರಭು ಪ್ರಕಾನ ದಿಂದ ಸನ್ಮಾನ ಹಾಗು ನೆನಪಿನ ಕಾಣಿಕೆ

ಮೈಸೂರು ದಸರಾ ಕನ್ನಡ ಸಂಘಹಾಗು ಫೇಸ್ ಬುಕ್ " ಗಾನ ಸವಿಗಾನ" ಗ್ರೂಪ್‌ ನಿಂದ 'ಗಾನ ಸುರಭಿ ' ಬಿರುದು ಹಾಗು ನೆನಪಿನ ಕಾಣಿಕೆ

ಇನ್ನೂ ಹಲವಾರು ಸಂಘ ಸಂಸ್ಥೆ ಗಳಿಂದ ಬಿರುದು ಸನ್ಮಾನ ದೊರಕಿದೆ.


ನೊಂದು ಬೆಂದಿತಲ್ಲೋ...ಮನಸು ...!!
ನೀ ಬಂದು ಮೂಡಿಸಿದೆ ...ಕನಸು
ಬರಡಾದ ಭೂಮಿಗೆ ಎಲ್ಲಿತ್ತು ಆಸೆ..
ಹಸಿರಾಗಿ ನಗುವಂತೆ ಮಾಡಿತ್ತು ನಿನ್ನ ಭಾಷೆ !! ನೊಂದು!!

ಕೆಳಗೆ ಬಿದ್ದ ಹೂವ ಎತ್ತಿ ಮುತ್ತಿಟ್ಟು !
ಎತ್ತಿ ಏರಿಸಿ ಬಿಟ್ಟೆಯಲ್ಲೋ ಹೊಳಪು ಕೊಟ್ಟು !
ಸತ್ತಿದ್ದ ಆಸೆಗಳಿಗೆ ಮತ್ತೆ ಪ್ರೇಮ ಸಿಂಚನ !
ಜೀವನದಲಿ ಎಂದಿರದ ಸಂಚಲನ ! ನೊಂದು !!

ಏಕೋ ಇಷ್ಟೊಂದು ಒಲವು ನನ್ನಲ್ಲಿ..!
ಬಣ್ಣ ಬಣ್ಣದ ಕನಸು ಇಂದು ಕಣ್ಣಲ್ಲಿ
ಸೋತು ಹೋದೆನೋ..ನಿನ್ನಲ್ಲಿ
ಬೇಧ ಭಾವ ಕಾಣದೆ ಹೋದೆವು ನಮ್ಮಲ್ಲಿ !!ನೊಂದು!!

ಸುರಭಿ ಲತಾ
.
https://youtu.be/FU2AnG9b-vo

https://www.facebook.com/profile.php?id=100005560334809

Last 10 Records

if the data has not been changed, no new rows will appear.

Day Followers Gain % Gain
August 07, 2023 344 +2 +0.6%
February 01, 2023 342 +7 +2.1%
September 30, 2022 335 +2 +0.7%
August 09, 2022 333 +4 +1.3%
July 03, 2022 329 -12 -3.6%
May 27, 2022 341 +4 +1.2%
April 19, 2022 337 -1 -0.3%
March 11, 2022 338 +6 +1.9%
January 13, 2022 332 +3 +1.0%
December 06, 2021 329 +3 +1.0%

Charts

Member of

More Clubhouse users