Dr.Suresh Chikkanna on Clubhouse

Updated: Mar 25, 2024
Dr.Suresh Chikkanna Clubhouse
1k Followers
262 Following
Jun 17, 2021 Registered
@siritv Username

Bio

ಡಾ.ಸುರೇಶ್ ಚಿಕ್ಕಣ್ಣ.
Dr. Suresh Chikkanna
International Renowned Photographer
Editorial chief of SIRI TV
Managing Director of Siri Music
founder of Siri magazine
President of Seva Siri foundation
********
ಬೆಂಗಳೂರಿಗೆ ಕೆಲಸವರಸಿ ಬಂದ ಇವರು ಸಣ್ಣ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿ, ತನ್ನೊಳಗಿದ್ದ ಫೋಟೋಗ್ರಫಿಯ ಕುರಿತಾದ ಆಸಕ್ತಿಯಿಂದ ಚಿಕ್ಕಪೇಟೆ ಸುಲೇಗಾಯಿ ಮೋಹನ್ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿಕೊಂಡು ಪ್ರಾಥಮಿಕ ಫೋಟೋ, ವಿಡಿಯೋಗ್ರಫಿಯ ಕೆಲಸಗಳನ್ನು ಕಲಿತರು. ತದನಂತರ ಮಂಜುಳ ವಿಷ್ಯುವಲ್ಸ್ ನಲ್ಲಿ ಆನ್ ಲೈನ್ ಎಡಿಟರ್ ಅಗಿ ಸಮುದಾಯ 25ರಲ್ಲಿ ಛಾಯಾಗ್ರಾಹಕರಾಗಿ ಅನೇಕ ರಂಗಭೂಮಿ, ಸಿನಿಮಾ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದರು.
ನಂತರ ತನ್ನದೇ ಸ್ವಂತ 'ಎಸ್ ಆರ್ ಹೈಟೆಕ್ ವಿಷನ್' ಎನ್ನುವ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಸಂಸ್ಥೆಯನ್ನು ಆರಂಭಿಸಿ, ಉದ್ಯಮ ಲೋಕಕ್ಕೆ ಕಾಲಿಟ್ಟು ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಶಕೆಯನ್ನು ಆರಂಭಿಸಿದರು.
ಅಲ್ಲಿಂದ ಮತ್ತೆ ಹಿಂದಿರುಗಿ ನೋಡದ ಇವರು ವೃತ್ತಿಯಲ್ಲಿ ಒಂದೊಂದೆ ಮೆಟ್ಟಿಲುಗಳನ್ನ ಹತ್ತುತ್ತ, ಸಿನಿಮಾ ಲೋಕದ ಟಾಪ್ ಮೋಸ್ಟ್ ತಾರೆಯರೆಲ್ಲರಿಗೂ ಸ್ಮೈಲ್ ಪ್ಲೀಸ್ ಎಂದು ಫೋಟೋ ಕ್ಲಿಕ್ಕಿಸುತ್ತಾರೆ. ಇದೊಂದು ಬಗೆಯಲ್ಲಿ ಇವರಿಗೆ ಹೆಚ್ಚಿನ ಹೆಸರನ್ನ ತಂದುಕೊಡುವುದಲ್ಲದೇ, ರಜನಿಕಾಂತ್, ಚಿರಂಜೀವಿ, ಅಂಬರೀಶ್, ತಾರಾ, ಸೋನಂ ಕಪೂರ್ ಸೇರಿದಂತೆ ಅನೇಕರ ಖಾಸಗಿ ಕಾರ್ಯಕ್ರಮಗಳಿಗೂ ಇವರೇ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯಕ್ರಮ ನಿರ್ವಹಿಸುತ್ತಾರೆ.
ಸಮಾಜದಿಂದ ಇಷ್ಟೆಲ್ಲ ಪಡೆದ ನಾನು ಸಮಾಜಕ್ಕೆ ಏನಾದರೂ ಕೊಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ, ಸಮಾಜದ ಅಭ್ಯುದಯಕ್ಕಾಗಿ "ಸಿರಿ" ಮಾಸಪತ್ರಿಕೆಯನ್ನ ಪ್ರಾರಂಭಿಸಿ, ಸೃಷ್ಟಿ, ಸಮಾಜ, ಸಿನಿಮಾ ಎನ್ನುವ ಮೂರು ವಿಭಾಗದ ಸುದ್ದಿಗಳನ್ನು ರಾಜ್ಯ-ದೇಶ-ವಿದೇಶಗಳಲ್ಲೂ ಪಸರಿಸುತ್ತಾರೆ.
ತಂತ್ರಜ್ಞಾನ ಬೆಳವಣಿಗೆ ಆಗುತ್ತಾ ಬಂದ ಹಾಗೆ ತಾನೂ ಕೂಡ ಅದಕ್ಕೆ ಒಗ್ಗಿಕೊಂಡು, ಡಿಜಿಟಲ್ ರಂಗದಲ್ಲೂ 'ಸಿರಿ ಸೌಂದರ್ಯ' ಅಂತರ್ಜಾಲ ತಾಣ, 'ಸಿರಿ ಟಿವಿ', 'ಸಿರಿ ಮ್ಯೂಸಿಕ್' ಎನ್ನುವ ಸಂಸ್ಥೆಯನ್ನೂ ಆರಂಭಿಸಿ ಈಗಲೂ ಅವೆಲ್ಲಕ್ಕೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ನಮ್ಮ ನಡುವೆ ಅಥವಾ ನಮ್ಮಲ್ಲಿ ಮಾತ್ರಾ ಕೆಲಸ ಮಾಡದೇ, ವಿದೇಶದಲ್ಲಿ ನಡೆಯುವ ಕೆಂಪೇಗೌಡ ಉತ್ಸವ, ಅಕ್ಕ ಸಮ್ಮೇಳನ ಸೇರಿದಂತೆ ಐದಾರು ಬೇರೆ ಬೇರೆ ದೇಶಗಳ ಕನ್ನಡ ಉತ್ಸವದಲ್ಲೂ ಭಾಗಿಯಾಗಿ, ಕನ್ನಡದ ಕಂಪಿಗೆ ಮಿಡಿದಿದ್ದಾರೆನ್ನಲು ಹೆಮ್ಮಯಾಗುತ್ತದೆ.
ಇಷ್ಟೆಲ್ಲಾ ವಿಭಾಗಗಳಲ್ಲಿ ಗುರುತಿಸಿಕೊಂಡು ದುಡಿದ ಇವರಿಗೆ ಅನೇಕ ಸಂಸ್ಥೆಗಳು, ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ರಾಜ್ ಕುಮಾರ್ ಪ್ರಶಸ್ತಿ, ಸಮಾಜಮುಖಿ ವ್ಯಕ್ತಿ ಸನ್ಮಾನಗಳು ಸೇರಿದಂತೆ ಡಾಕ್ಟರೇಟ್ ಗೌರವ ಕೂಡ ಸಂದಿರುವುದು ಹೆಮ್ಮೆಯ ವಿಚಾರ.
ಇವರ ಹೆಸರಲ್ಲಿ ಗಿನ್ನಿಸ್ ದಾಖಲೆಯೂ ಕೂಡ ಇದ್ದು, ಫೋಟೋಗ್ರಫಿ ಇವರಿಗೆ ಎಲ್ಲವನ್ನ ದಯಪಾಲಿಸುವ ಅಕ್ಷಯ ಬಿಂದುವಾಗಿದೆ ಎನ್ನುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ.
8747990000
[email protected]

Invited by: Naresh Shenoy

Last 10 Records

if the data has not been changed, no new rows will appear.

Day Followers Gain % Gain
March 25, 2024 1,020 +1 +0.1%
March 08, 2024 1,019 +1 +0.1%
February 15, 2024 1,018 +1 +0.1%
January 28, 2024 1,017 +1 +0.1%
January 11, 2024 1,016 +43 +4.5%
October 04, 2022 973 +7 +0.8%
August 13, 2022 966 +4 +0.5%
July 07, 2022 962 +6 +0.7%
May 31, 2022 956 -1 -0.2%
April 23, 2022 957 +23 +2.5%

Charts

Member of

More Clubhouse users