ಮತಾಂತರ ಏಕೆ?
ಹೈದರಾಬಾದಿನ ನವಾಬ ದೊಡ್ಡಮೊತ್ತದ ಆಮಿಷವನ್ನೊಡ್ಡಿದ್ದಾಗ, ಕ್ರಿಶ್ಚಿಯನ್ನರು ಬಲುದೊಡ್ಡ ಅಧಿಕಾರದ ಹರಿವಾಣವನ್ನೇ ಎದುರಲ್ಲಿಟ್ಟಾಗಲೂ ಅವೆಲ್ಲವನ್ನೂ ಧಿಕ್ಕರಿಸಿ ಅಂಬೇಡ್ಕರರು ಬೌದ್ಧಮತವನ್ನೇ ಅಪ್ಪಿಕೊಂಡರಲ್ಲ, ಅದರ ಕುರಿತಂತೆ ಗುಲಾಮರು ಚರ್ಚೆ ನಡೆಯಲು ಬಿಡುವುದೇ ಇಲ್ಲ. ಖಾಸಗಿ ವಾಹಿನಿಯ ಉಡುಪಿಯ ಚರ್ಚೆಯಲ್ಲಿ ಈ ಪ್ರಶ್ನೆಯನ್ನು ಕಾಂಗ್ರೆಸ್ಸಿನ ಹೆಣ್ಣುಮಗಳಿಗೆ ಕೇಳಿದೊಡನೆ ಆಕೆಯ ಯುರೇಕಾ ಭಾವ ಇಳಿದುಹೋಯ್ತು. ಇತಿಹಾಸವನ್ನು ಬಿಡಿ, ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿ ಎಂದು ವರಸೆಯನ್ನೇ ಬದಲಾಯಿಸಿಬಿಟ್ಟಳು. ಇತಿಹಾಸವನ್ನೇ ಅರಿಯದ ಮಂದಿ ಪ್ರಸ್ತುತ ಪರಿಸ್ಥಿತಿಗೆ ಯಾವ ರೀತಿ ಪ್ರತಿಸ್ಪಂದಿಸಬಲ್ಲರು ಹೇಳಿ! ವಾಸ್ತವವಾಗಿ ಅಂಬೇಡ್ಕರರು ಇಸ್ಲಾಂ ಮತ್ತು ಕ್ರೈಸ್ತಮತವನ್ನು ಧಿಕ್ಕರಿಸಿ ಭಾರತಜನ್ಯ ಬೌದ್ಧಮತವನ್ನು ಆಲೋಚನೆ ಮಾಡಿಯೇ ಒಪ್ಪಿಕೊಂಡಿದ್ದರು. ಹಾಗೆ ಮಾಡುವ ಮೊದಲು ಎಲ್ಲ ಮತಗಳ ಅಧ್ಯಯನ ಮಾಡಿ, ಆ ಮತಗಳ ಅನುಯಾಯಿಗಳ ಮನೋಗತವನ್ನು ಅರಿತು ಆನಂತರವೇ ಆ ನಿರ್ಧಾರ ಕೈಗೊಂಡಿದ್ದರು. ಇಸ್ಲಾಂ ಮತ್ತು ಕ್ರೈಸ್ತಮತಕ್ಕೆ ಮತಾಂತರವಾಗುವುದರಿಂದ ರಾಷ್ಟ್ರಾಂತರವಾಗುತ್ತದೆ ಎಂಬ ಅರಿವಿದ್ದದ್ದು ಅವರಿಗೇ. ಆದರೆ ಅಚ್ಚರಿಯೇನು ಗೊತ್ತೇ? ಅಂಬೇಡ್ಕರ್ವಾದಿಗಳು ಎಂದು ಕರೆಯಲ್ಪಡುವ ಮಂದಿಯೂ ಈ ವಿಚಾರವನ್ನು ಅವಗಣನೆ ಮಾಡಿ, ಅಂಬೇಡ್ಕರರು ಮತಾಂತರವಾಗಿದ್ದರಿಂದಲೇ ದಲಿತರೂ ಮತಾಂತರವಾಗಬಹುದು ಎಂದು ವಾದಿಸುತ್ತಾರೆ. ಬಹುಶಃ ಕಾಂಗ್ರೆಸ್ಸಿನ ನಾಯಕರು ಮತ್ತೊಮ್ಮೆ ಅಂಬೇಡ್ಕರ್ರ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಂಡರೆ ಅವರ ವಿಶಾಲ ರಾಷ್ಟ್ರೀಯತೆಯ ಆಲೋಚನೆ ವೇದ್ಯವಾದೀತು.
if the data has not been changed, no new rows will appear.
Day | Followers | Gain | % Gain |
---|---|---|---|
July 01, 2024 | 1,272 | +15 | +1.2% |
May 29, 2024 | 1,257 | +3 | +0.3% |
April 26, 2024 | 1,254 | +20 | +1.7% |
March 17, 2024 | 1,234 | +12 | +1.0% |
February 24, 2024 | 1,222 | +11 | +1.0% |
February 07, 2024 | 1,211 | +18 | +1.6% |
January 20, 2024 | 1,193 | +33 | +2.9% |
January 04, 2024 | 1,160 | +38 | +3.4% |
December 19, 2023 | 1,122 | +2 | +0.2% |
December 04, 2023 | 1,120 | +5 | +0.5% |