ಕಾ.ವೀ.ಕೃಷ್ಣದಾಸ್ ಮಂಗಳೂರು on Clubhouse

Updated: Sep 12, 2023
ಕಾ.ವೀ.ಕೃಷ್ಣದಾಸ್ ಮಂಗಳೂರು Clubhouse
146 Followers
662 Following
@kvkrishnadas Username

Bio

1980ರಲ್ಲಿ ಮಂಗಳೂರಿನ ಬೋಂದೆಲ್ ಎಂಬಲ್ಲಿ ಹುಟ್ಟಿದ ಕಾ.ವೀ.ಕೃಷ್ಣದಾಸ್ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಸುಮ ಸೌರಭ ಪಾಕ್ಷಿಕ ಪತ್ರಿಕೆಯಲ್ಲಿ 5 ವರ್ಷಗಳ ಕಾಲ ಉಪಸಂಪಾದಕರಾಗಿದ್ದರು. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಒಂದು ವರ್ಷ ಉಪ ಸಂಪಾದಕರಾಗಿ ಸೇವೆ ಸಲ್ಲಿಕೆ..ತಮ್ಮದೇ ಯಶಕರ್ನಾಟಕ ವಾರಪತ್ರಿಕೆ ಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
1995 ರಿಂದ 'ಯಶುಪ್ರಿಯ ಪಕ್ಷಿಕೆರೆ' ಎಂಬ ಕಾವ್ಯನಾಮದಲ್ಲಿ ಕತೆ,ಕವಿತೆ,ಲೇಖನ,ವಿಮರ್ಶೆ ಮತ್ತು ಬರಹಗಳನ್ನು ಬರೆಯುತ್ತಿದ್ದಾರೆ. ಪ್ರಪ್ರಥಮ ಗ್ರಾಮೀಣ ಸಾಹಿತ್ಯ ಸಮ್ಮೇಳನ, 9ನೇ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 11ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 4ನೇ ಚುಟುಕು ಸಾಹಿತ್ಯ ಸಮ್ಮೇಳನಗಳಲ್ಲಿ ಆಹ್ವಾನಿತ ಕವಿಯಾಗಿ ಭಾಗವಹಿಸಿದ್ದಾರೆ. 'ನಾನೊಂದು ಪುಟ್ಟ ಹಣತೆ' 'ಶರಸಂಚಯ' 'ಬಾಗಿಲು ತೆರೆದಿದೆ' ಇವರ ಕನ್ನಡ ಕವನ ಸಂಕಲನಗಳು. 'ನೂರೊಂದು ಕತೆಗಳು' ಇವರ ಸಂಪಾದಿತ ಕಥಾಸಂಕಲನ. ಮೂಕಹಕ್ಕಿ, ಮೋಕೆದ ಮಗಲ್, ಎನ್ನ ಮೋಕೆದ ಇವರು ಸಾಹಿತ್ಯ ನೀಡಿರುವ ಪ್ರಮುಖ ಆಡಿಯೋ ವೀಡಿಯೊ ಆಲ್ಬಂ ಗಳು. ಉಡುಗೊರೆ, ಕೋರಿರೊಟ್ಟಿ, ಪಮ್ಮಣ್ಣೆ ದಿ ಗ್ರೇಟ್, ಭೋಜರಾಜ್ MBBS, ಇವರು ಸಾಹಿತ್ಯ ನೀಡಿರುವ ಸಿನೆಮಾಗಳು. 2000 ರಿಂದ 2008ರವರೆಗೆ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದ ಇವರು ಕಳೆದ 14ವರ್ಷಗಳಿಂದ ಟೋಲ್, ರಿಟೇಲ್ ಮತ್ತು ಮಾಲ್ ಮ್ಯಾನೆಜ್ಮೆಂಟ್ ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ನವೆಂಬರ್ 29,2020 ರಿಂದ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚುವರಿಯಾಗಿ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಭಾರ ಜೀಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ತುಳು ಹಿಂದಿ ಇಂಗ್ಲಿಷ್ ಮತ್ತು ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ರಚಿಸುವ ಇವರ 'ಬೆಳಕು' ಇವರದೇ ಸ್ವರಚಿತ ನುಡಿಮುತ್ತುಗಳ ಕೃತಿ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಇವರ 'ಮುಕ್ಕಾಲು ಸತ್ಯ '(ಕಾದಂಬರಿ), 'ಗೆಲುವಿನ ಕುದುರೆ' ಕವನ ಸಂಕಲನ, 'ಚಂದ್ರಲೋಕದ ತಾರೆಯರು' (ಕನ್ನಡ ಹಾಯ್ಕುಗಳ ಸಂಕಲನ), ಹಾಗೂ 'The Truth' ( ಇಂಗ್ಲಿಷ್ ಹಾಯ್ಕುಗಳ ಸಂಕಲನ) ಮುದ್ರಣಕ್ಕೆ ಸಿದ್ಧವಾಗಿದೆ.

ಸಂಪರ್ಕ 8310388415

Last 10 Records

if the data has not been changed, no new rows will appear.

Day Followers Gain % Gain
September 12, 2023 146 +5 +3.6%
October 02, 2022 141 +2 +1.5%
August 11, 2022 139 -1 -0.8%
July 05, 2022 140 +2 +1.5%
May 29, 2022 138 -2 -1.5%
April 21, 2022 140 +1 +0.8%
March 13, 2022 139 +5 +3.8%
January 15, 2022 134 +2 +1.6%
December 08, 2021 132 +5 +4.0%

Charts

Member of

More Clubhouse users