ಬೆಳಕು ಮೂಡುವ ಮುನ್ನ
ಓಡುವೆ ನೀನು ಎಲ್ಲಿಗೆ
ಇನ್ನೂ ರವಿ ಬಂದಿಲ್ಲ
ಉಷೆ ಅವನ ಜೊತೆಗಿಲ್ಲ
ನನ್ನ ಕನಸಲ್ಲಿ ತುಸು ಹೊತ್ತು
ನಿಲ್ಲದೆ ಹೋಗುವೆ ಈಗ ಎಲ್ಲಿಗೆ?
ನೀ ಕದ್ದ ಕನಸುಗಳು
ಬೇಕಿವೆ ಇಂದಿಗೆ
ನೀ ನನ್ನ ಬಿಟ್ಟು ಓಡಬೇಡ ಮಲ್ಲಿಗೆ
ನಾವಿಬ್ಬರು ಕೂಡಿ ಹೆತ್ತು
ಸಾಕಿ ಸಲುಹಿದ ಕನಸುಗಳ
ಕದ್ದು ಓಡುವುದಾದರೂ ಎಲ್ಲಿಗೆ?
ಕನಸ ರಾತ್ರಿಗಳಿಗೆ
ಬೆಳಕಿಲ್ಲೆಂದು ಅಂಜಬೇಡ
ಮನಸ ಬತ್ತಿ ಮಾಡಿ ಹಚ್ಚಿಹೆನು
ನನ್ನ ಜೊತೆ ನಡೆ ಮಲ್ಲಿಗೆ
ನೀನು ನಡೆಯುವರೆಗೂ
ಬರುವೆ ಜೊತೆಗೆ
ಆದರೆ,
ನನ್ನ ಬಿಟ್ಟೋಡಬೇಡ ಮನಮಲ್ಲಿಗೆ
Invited by: Priyanka Prakash
if the data has not been changed, no new rows will appear.
Day | Followers | Gain | % Gain |
---|---|---|---|
September 19, 2023 | 57 | 0 | 0.0% |
June 29, 2022 | 57 | -4 | -6.6% |
October 24, 2021 | 61 | +1 | +1.7% |
September 17, 2021 | 60 | +47 | +361.6% |