ಹವ್ಯಾಸಿ ಚಾರಣಿಗ. ವೃತ್ತಿಪರ ಅಭಿಯಂತರ.
ಒಂದು ಸುಂದರ ಕವನ
ಪರ್ವತದಿಂದ ಹರಿಯುವ ನದಿಗೇನು
ತಿಳಿದಿದೆ ತನ್ನ ಪಯಣ ಎಲ್ಲಿಗೆಂದು?
ಗಿಡದಲ್ಲಿ ಅರಳಿದ ಹೂವಿಗೇನು ತಿಳಿದಿದೆ
ತನ್ನ ನಮರ್ಪಣೆ ಯಾವ ದೇವರ ಪಾದಕ್ಕೆಂದು?
ಸ್ವಚ್ಛಂದವಾಗಿ ಬೀಸುವ ಗಾಳಿಗೇನು ತಿಳಿದಿದೆ ತನ್ನ ಚಲನೆ ಯಾವ ದಿಕ್ಕಿಗೆಂದು?
ವೈರಾಗ್ಯ, ದ್ವೇಷ ಅಸೂಯೆ ಏಕೆ ಮನಸಲ್ಲಿ,
ಪ್ರತಿದಿನವೂ ಅಚ್ಚರಿ ಕಾದಿರುವ ಈ ಬದುಕಿಗೇನು ತಿಳಿದಿದೆ ತನ್ನ ಭವಿಷ್ಯ ಎತ್ತ ಸಾಗುವುದೆಂದು?
🇮🇳