ಕನ್ನಡಿಗ | ಕಬ್ಬಿಗ
ಕಾನನದ ಹಾದಿಯೋಳು ಒಂಟಿಮನವು
ಕಾರ್ಮೋಡ ಕವಿದ ಆಕಾಶವ ದಿಟ್ಟಿಸುತ್ತಾ
ಮಿನುಗುವ ಚಿಕ್ಕಿಯ ಹುಡುಕ ಬಯಸಿದೆ
ಅರಿವಿಲ್ಲದ ಒಂಟಿಮನವು ಸಾಗಿದೆ |
ಸಿಡಿಲ್ಗರಿದ ಮಿಂಚಿನ ಹರಿವು
ಮಂದಬೆಳಕಿನಲ್ಲಿ ಕಂಡಿದೆ,
ನಕ್ಷತ್ರಗಳ ಕಣ್ಣಾಮುಚ್ಚಾಲೆಯಲಿ
ಅರಿವಿಲ್ಲದ ಒಂಟಿಮನವು ಸಾಗಿದೆ |
ಗುಡ್ಡಗಳ ಏರಿ ಇಳಿವಜಾರಿನಲಿ
ಹರಿವ ಝರಿಯ ನಾದಗಳ ಆಲಿಸಿದ
ಕರ್ಣಗಳು ನಿಮಿರಿ ಕುಣಿದಾಡಿವೆ
ಅರಿವಿಲ್ಲದ ಒಂಟಿಮನವು ಸಾಗಿದೆ |
ಸುತ್ತುತಾ ಸಾಗಿದ ಮನಕೆ
ಅರಿವೆಂಬ ಜ್ಞಾನದ ಬೆಳಕು
ಭರವಸೆಯ ಚಂಡಮಾರುತ ಎಬ್ಬಿಸಿ
ಅರಿವಿಲ್ಲದ ಒಂಟಿಮನವು ಸಾಗಿದೆ |
ಬಿಗಿದ ಮನವು ಪ್ರಫುಲ್ಲತೆಯ
ಹೊಳೆಯಲಿ ಮಿಂದೆದು
ನಾಳೆಯ ಬರವಸೆಗಳೊಡನೆ
ಸೆಣೆಸಾಡಲು ಸಿದ್ದಗೊಂಡಿದೆ
ಅರಿವಿಲ್ಲದ ಒಂಟಿಮನವು ನಸುನಕ್ಕು ಸಾಗಿದೆ |